

ವಿಜಯಪುರ: ಇಂದು ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಾನಪೂರ್ಣ ವೇದಿಕೆಗಳು ಅವರಿಗೆ ಭವಿಷ್ಯದ ವಾಣಿಜ್ಯ ಮತ್ತು ಉದ್ಯಮ ೇತ್ರಗಳಲ್ಲಿ ಸ್ಪರ್ಧಾತ್ಮಕವಾಗಿ ಅನುವು ಮಾಡಿಕೊಡುತ್ತಿವೆ ಎಂದು ಬಿಎಲ್ಡಿಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ವಿ.ಎಸ್. ಬಗಲಿ ಹೇಳಿದರು.
ನಗರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ವತಿಯಿಂದ "ವಾಣಿಜ್ಯ ಮತ್ತು ನಿರ್ವಹಣೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು: ಅವಕಾಶಗಳು ಮತ್ತು ಸವಾಲುಗಳು' ಎಂಬ ವಿಷಯದ ಮೇಲೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ನವೋದ್ಯಮ, ತಂತ್ರಾನ ಮತ್ತು ಆರ್ಥಿಕ ನೀತಿಯ ಚರ್ಚೆಗಳು ಶೈಣಿಕ ೇತ್ರದ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇಂತಹ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳು ನಮ್ಮ ವಿದ್ಯಾರ್ಥಿಗಳನ್ನು ಜಾಗೃತ ಮತ್ತು ದೃಢ ನಿರ್ಧಾರ ಕೈಗೊಳ್ಳಲು ಅವಕಾಶ ರೂಪಿಸುತ್ತವೆ ಎಂದರು.
ಮುಖ್ಯ ಅತಿಥಿ ಡಾ. ಫ.ಗು. ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರದಿಪ ಮಾಲಾಜಿ ಮಾತನಾಡಿ, ಸದ್ಯದ ಬದಲಾಯುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ನವೋದ್ಯಮ, ಡಿಜಿಟಲೀಕರಣ ಮತ್ತು ಸ್ಮಾರ್ಟ್ ನಿರ್ವಹಣಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.
ಸೋಲಾಪುರ ವಿವಿಯ ಎಂಬಿಎ ವಿಭಾಗದ ಮುಖ್ಯಸ್ಥೆ ಡಾ. ರಶ್ಮಿ ದಾತಾರ ಮಾತನಾಡಿ, ಆಧುನಿಕ ವಾಣಿಜ್ಯದಲ್ಲಿ ಡೇಟಾ ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ ಮತ್ತು ಶಾಶ್ವ ಅಭಿವೃದ್ಧಿಯ ತತ್ವಗಳು ಅತ್ಯಂತ ಪ್ರಭಾವ ಬೀರುತ್ತಿವೆ. ವಿದ್ಯಾರ್ಥಿಗಳು ಈ ನವೀನ ೇತ್ರಗಳಲ್ಲಿ ತೊಡಗಬೇಕು ಎಂದು ಕರೆ ನೀಡಿದರು.
ಪ್ರಾಚಾರ್ಯ ಪ್ರೊ. ಬಿ.ಎಸ್. ಬೆಳಗಲಿ ಅಧ್ಯತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕಿ ಪ್ರೊ. ರಶ್ಮಿ ಪಾಟೀಲ, ಉಪ ಪ್ರಾಚಾರ್ಯ ಎಸ್.ಎ. ಪಾಟೀಲ ವೇದಿಕೆಯಲ್ಲಿದ್ದರು. ಕುಮಾರಿ ರಶ್ಮಿ ಕುಮಟಗಿ ಪ್ರಾರ್ಥಿಸಿದರು. ಭಾರತಿ ಮಠ ಸ್ವಾಗತಿಸಿದರು. ಸ್ನೇಹಾ ಬೆನಕಟ್ಟಿ ಪರಿಚಯಿಸಿದರು. ದಾನಮ್ಮ ಗಿಡವೀರ ನಿರೂಪಿಸಿದರು. ವಿಜಯಕುಮಾರ ತಳವಾರ ವಂದಿಸಿದರು.
ಉಪನ್ಯಾಸಕರಾದ ಚಿದಾನಂದ ಬ್ಯಾಹಟ್ಟಿ, ರವಿ ಮನಗೂಳಿ, ಶಿವಾನಂದ ಮಠಪತಿ, ನಿವೇದಿತಾ ಬಳೂರಗಿ, ಉಜ್ವಲಾ ಮತ್ತಿತರರಿದ್ದರು.