

ಸಿರವಾರ: ಜ್ಞಾನ ವಿಕಾಸ ಕಾರ್ಯಕ್ರಮ ಮಹಿಳೆಯರನ್ನು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಸಹಾಯ ಮಾಡಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಅಧಿಕಾರಿ ಚಂದ್ರಹಾಸ ಹೇಳಿದರು.
ಪಟ್ಟಣದ ಈಶ್ವರ ದೇವಸ್ಥಾನದ ಆವರಣದ ವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಜ್ಞಾನ ವಿಕಾಸವು ಹೇಮಾವತಿ ಹೆಗ್ಗಡೆ ಅವರ ಕನಸಿನ ಕೂಸಾಗಿದೆ. ಈ ಕಾರ್ಯಕ್ರಮದಿಂದ ವ್ಯಕ್ತಿತ್ವ ವಿಕಾಸನ, ಸಂಸ್ಕಾರ, ಸಂಸ್ಕೃತಿ, ಆರೋಗ್ಯ, ಸಮಾಜದ ಸ್ವಾಸ್ಥ್ಯ ಕಾಪಾಡುವ ಕುರಿತು ಸ್ತ್ರೀಯರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಶಿಕ್ಷಕಿ ಮಂಜುಳಾ ದರ್ಶನಕರ್, ಒಕ್ಕೂಟದ ಅಧ್ಯಕ್ಷೆ ರಾಧಾಬಾಯಿ ದರ್ಶನಕರ್, ಮೇಲ್ವಿಚಾರಕಿ ವನಿತಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕವಿತಾ, ಸೇವಾ ಪ್ರತಿನಿಧಿಗಳು ಮತ್ತು ಸಂಘದ ಸದಸ್ಯರು ಇದ್ದರು.