ಮಹಿಳೆಯರ ಬಲವರ್ಧನೆಗೆ ಜ್ಞಾನವಿಕಾಸ ಸಹಕಾರಿ

kdr daaa
ಖಂಡುಗದಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸದ ವಾರ್ಷಿಕೋತ್ಸವದಲ್ಲಿ ಮಹಿಳೆಯರು ಭಾಗವಹಿಸಿದ್ದರು. ಶೇಖರಪ್ಪ, ವೈ.ಎನ್.ಸಂತೋಷ್, ಸುಮಿತ್ರಾ, ಮಮತಾ ಇತರರಿದ್ದರು.
Published on

ಡೂರು: ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಬಲವರ್ಧನೆ ಜತೆಗೆ ಸಾಮಾಜಿಕ ಅರಿವು ಹೊಂದಲು ಜ್ಞಾನವಿಕಾಸದಡಿ ಕಾರ್ಯಗಾರಗಳು ಹೆಚ್ಚು ಸಹಕಾರಿ ಎಂದು ಖಂಡುಗದಹಳ್ಳಿ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದ ಧರ್ಮದರ್ಶಿ ಕೆ.ಬಿ.ಸೋಮೇಶ್ ಅಭಿಪ್ರಾಯ ಪಟ್ಟರು.

ಖಂಡುಗದಹಳ್ಳಿ ಶ್ರೀ ಸೋಮೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಮಂಗಳವಾರ ಯಗಟಿ ವಲಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಶೈಕ್ಷಣಿಕ ಜತೆಗೆ ಸಾಮಾಜಿಕ ಅರಿವು ಮೂಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹೆಚ್ಚು ಒತ್ತು ನೀಡುತ್ತಿರುವುದು ಶ್ಲಾಘನೀಯ. ಇದರ ಜತೆ ಧಾರ್ಮಿಕ ಪ್ರಜ್ಞೆಯಿಂದ ಸಂಘದ ಪ್ರಗತಿಗೆ ಪ್ರೋತ್ಸಾಹ ನೀಡಿದಂತಾಗಲಿದೆ ಎಂದರು. ವಾರ್ಷಿಕೋತ್ಸ ಅಂಗವಾಗಿ ವರಮಹಾಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ತಾಲೂಕು ಯೋಜನಾಧಿಕಾರಿ ಸಂಜೀವ್ ಗೌಡ, ಅರ್ಚಕರಾದ ಶೇಖರಪ್ಪ, ವೈ.ಟಿ.ಪಂಚಾಕ್ಷರಿ, ವೈ.ಎನ್.ಸಂತೋಷ್, ಜ್ಞಾನ ವಿಕಾಸ ಕೇಂದ್ರದ ಸೇವಾ ಪ್ರತಿನಿಧಿ ಸುಮಿತ್ರಾ, ಮಮತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net