ಜ್ಞಾನ, ಭಾಷೆಯ ಹಿಡಿತದಿಂದ ಉತ್ತಮ ವಾಗ್ಮಿಯಾಗಲು ಸಾಧ್ಯ

kota
Published on

ಕೋಟ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆ ಜೊತೆಗೆ ಎಲ್ಲಿ, ಹೇಗೆ ಮಾತನಾಡಬೇಕು ಎಂಬ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಲೇಖನಗಳನ್ನು ಪುಸ್ತಕಗಳನ್ನು ಓದುವುದರ ಮೂಲಕ ವಿಷಯಜ್ಞಾನವನ್ನು ಸಂಪಾದಿಸಬೇಕು. ಭಾಷೆಗಳ ಬಗ್ಗೆ ವಿಶೇಷವಾದ ಗಮನ ಹರಿಸಿ ಹೆಚ್ಚೆಚ್ಚು ಭಾಷೆಗಳನ್ನು ಕಲಿಯುವುದರಿಂದ ವ್ಯವಹರಿಸಲು ಸಹಕಾರಿಯಾಗುತ್ತದೆ. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡಲ್ಲಿ ಮುಂದೆ ಉತ್ತಮ ವಾಗ್ಮಿ ಆಗಲು ಸಾಧ್ಯ ಎಂದು ರೇಡಿಯೋ ಕುಂದಾಪುರದ ಕಾರ್ಯ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ತಿಳಿಸಿದರು.

ಇತ್ತೀಚಿಗೆ ಕೋಟದ ವಿವೇಕ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಏರ್ಪಡಿಸಿದ ಸಂವಹನ ಕಲೆ ಕುರಿತು ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ ಸ್ವಾಗತಿಸಿದರು. ಪ್ರಾಪ್ತಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಂಚಾಲಕ ಚಂದ್ರಶೇಖರ್ ಎಚ್.ಎಸ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net