ಮನಸ್ಥಿತಿ ಅರಿತರೆ ಸಂಘರ್ಷ ಕಡಿಮೆ ಮಾಡಬಹುದು

27 ckm 4
ಚಿಕ್ಕಮಗಳೂರು ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಚಿಕ್ಕಮಗಳೂರು ರೋಟರಿ ಕ್ಲಬ್ ಮತ್ತು ಒನ್ ಅರ್ಥ್ಟ್ರಸ್ಟ್-ಅರಣ್ಯಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಮನ್ವಯತೆಯಿಂದ ಸುಸ್ಥಿರತೆ ಕುರಿತ ಸಂವಾದ ಕಾರ್ಯಕ್ರಮವನ್ನು ಸಿಸಿಎಫ್ ಉಪೇಂದ್ರ ಪ್ರತಾಪಸಿಂಗ್ ಉದ್ಘಾಟಿಸಿದರು. ಕೆ.ಟಿ.ಬೋರಯ್ಯ, ಯಶಪಾಲ್ ಕ್ಷೀರಸಾಗರ, ಎಂ.ಎಲ್.ಸುಜಿತ್, ದಿಲೀಪ್ ಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ವನ್ಯಜೀವಿಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದರಿಂದ ವನ್ಯಜೀವಿ-ಮಾನವ ಸಂಘರ್ಷ ಕಡಿಮೆ ಮಾಡಬಹುದು. ಸಮನ್ವಯತೆಯಿಂದ ಸುಸ್ಥಿರತೆಯೂ ಸಾಧ್ಯವಾಗಲಿದೆ ಎಂದು ಅರಣ್ಯ ಇಲಾಖೆ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್ ನುಡಿದರು.

ನಗರದ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಚಿಕ್ಕಮಗಳೂರು ರೋಟರಿ ಕ್ಲಬ್ ಮತ್ತು ಒನ್ ಅರ್ಥ್ಟ್ರಸ್ಟ್-ಅರಣ್ಯಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಮನ್ವಯತೆಯಿಂದ ಸುಸ್ಥಿರತೆ ಕುರಿತ ಸಂವಾದ ಕಾರ್ಯಕ್ರಮವನ್ನುz್ದೆÃಶಿ ಮಾತನಾಡಿದ ಅವರು, ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ಶತ ಶತಮಾನಗಳಿಂದ ಇz್ದÉÃ ಇದೆ. ಆನೆ ಸೇರಿದಂತೆ ಹಲವು ವನ್ಯಜೀವಿಗಳು ಮನುಷ್ಯನ ಉz್ದÉÃಶಗಳನ್ನು ಕೆಲಮಟ್ಟಿಗೆ ಅರ್ಥಮಾಡಿಕೊಂಡು ವರ್ತಿಸುವುದನ್ನು ಅಭ್ಯಾಸಮಾಡಿಕೊಂಡಿವೆ. ಆದರೆ ಮಾನವ ಮಾತ್ರ ವನ್ಯಜೀವಿಗಳ ಜೀವನ ಕ್ರಮವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಹಾಗಾಗಿ ಜನವಸತಿಯ ಕಡೆಗೆ ಬರುವ ವನ್ಯಜೀವಿಗಳನ್ನು ನಿಯಂತ್ರಿಸಲು ಕಷ್ಟಸಾಧ್ಯವಾಗಿದೆ ಎಂದರು.
ಸAಘರ್ಷ ಕಡಿಮೆ ಮಾಡಲು ಜನರ ಸಹಕಾರ ಅತಿಮುಖ್ಯ. ಸಮನ್ವಯತೆಯಿಂದ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ಸರ್ಕಾರ ವನ್ಯಜೀವಿಗಳಿಂದ ಹಾನಿ ನಡೆದ ಸಂದರ್ಭಗಳಲ್ಲಿ ಪರಿಹಾರವನ್ನು ನೀಡುತ್ತಾ ಬಂದಿವೆ. ಪ್ರಾಣಹಾನಿ, ಶಾಶ್ವತ ಅಂಗವಿಕಲತೆ, ಭಾಗಶಃ ಅಂಗವಿಕಲತೆ, ಬೆಳೆಹಾನಿ ಮತ್ತಿತರ ಸಂದರ್ಭಗಳಲ್ಲಿ ದಯಾತ್ಮಕ ಧನವನ್ನು ನೀಡುತ್ತಿದೆ. ಕಾಲಕಾಲಕ್ಕೆ ಮೊತ್ತವನ್ನು ಹೆಚ್ಚಿಸುತ್ತಾ ಬಂದಿದೆ ಎಂದು ಹೇಳಿದರು.
ವಾಸಸ್ಥಾನದಿಂದ ವಿವಿಧ ಕಾರಣಗಳಿಗಾಗಿ ಹೊರಬರುವ ವನ್ಯಜೀವಿಗಳಿಗೆ ತೊಂದರೆಯಾಗದAತೆ ವರ್ತಿಸುವುದು ಮುಖ್ಯ. ವನ್ಯಜೀವಿಗಳು, ಕಾಡು, ಸರ್ಕಾರ ಎಲ್ಲವೂ ಜನರಿಗೇ ಸೇರಿದ್ದು. ಇವುಗಳ ಸಂರಕ್ಷಣೆಯ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ಮರೆಯಬಾರದು. ಜನವಸತಿಯತ್ತ ವನ್ಯಪ್ರಾಣಿ ಬಂದಾಗ ತಕ್ಷಣ ಅರಣ್ಯಇಲಾಖೆಗೆ ತಿಳಿಸಿದರೆ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಅಥವಾ ವಾಸಸ್ಥಾನಕ್ಕೆ ಓಡಿಸುವ ಕೆಲಸವನ್ನು ಮಾಡಲಾಗುವುದು ಎಂದರು.
ಕಾಡಿನಿAದ ಹೊರಬರದಂತೆ ವನ್ಯಜೀವಿಗಳನ್ನು ನಿರ್ಭಂಧಿಸಲು ಅನೇಕ ಕ್ರಮಗಳನ್ನು ಸರ್ಕಾರದ ಅನುಮೋದನೆಯೊಂದಿಗೆ ಅರಣ್ಯ ಇಲಾಖೆ ಕೈಗೊಂಡಿದೆ. ದೇಶದ ಎಲ್ಲಕಡೆಯೂ ಈ ರೀತಿಯ ಸಂಘರ್ಷ ಇಲ್ಲ. ಅರಣ್ಯದ ಸಮೀಪವಿರುವ ಸ್ಥಳಗಳಲ್ಲಿ ಒತ್ತುವರಿ ಸೇರಿದಂತೆ ವಿವಿಧ ಕಾರಣಗಳಿಗೆ ಜೀವಿಗಳು ಆಹಾರ, ನೀರು ಬಯಸಿ ಹೊರಬರುತ್ತವೆ. ಕೆಲವೊಮ್ಮೆ ಸಂಚಾರ ಅವುಗಳ ಅಭ್ಯಾಸವಾಗಿರುತ್ತದೆ. ರೈಲ್ವೆ ಬ್ಯಾರಿಕೇಡ್ ವನ್ಯಜೀವಿ ತಡೆಯುವಲ್ಲಿ ಹೆಚ್ಚು ಪರಿಣಾಮಕಾರಿ. ಆದರೆ ಇದಕ್ಕಾಗಿ ಪ್ರತಿ ಕಿ.ಮೀ.ಗೆ ೧.೫ಕೋಟಿರೂ.ವೆಚ್ಚ ತಗಲುತ್ತಿದೆ. ಎಲ್ಲೆಡೆಯೂ ರೈಲ್ವೇ ಬ್ಯಾರಿಕೇಡ್ ಅಳವಡಿಕೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕೆ.ಟಿ.ಬೋರಯ್ಯ ಮಾತನಾಡಿ, ಕೈಗಾರಿಕೆಗಳನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ಕೆಲ ಅರಣ್ಯಪ್ರದೇಶದಲ್ಲಿ ಕೈಗಾರಿಕೆಯ ಕಚ್ಛಾವಸ್ತುಗಳನ್ನು ಪೂರೈಸಲು ನೀಲಗಿರಿ-ಅಕೇಶಿಯಾದಂತಹ ಏಕಜಾತಿಯ ಮರಗಳನ್ನು ಬೆಳೆಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಅದನ್ನು ಬಿಟ್ಟು ಹಣ್ಣು, ಕಾಯಿ ಸೇರಿದಂತೆ ವಿವಿಧ ಜಾತಿಯ ಸಸ್ಯಗಳನ್ನು ಬೆಳೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಭದ್ರವನ್ಯಜೀವಿ ವಿಭಾಗದ ಕ್ಷೇತ್ರನಿರ್ದೇಶಕ ಯಶಪಾಲ ಕ್ಷೀರಸಾಗರ ಮಾತನಾಡಿ, ವನ್ಯಜೀವಿಗಳು ದೇಶದ ಸಂಪತ್ತು. ಅವುಗಳಿಗೆ ಮೂಲಭೂತ ಸೌಕರ್ಯವನ್ನು ಕಾಡಿನೊಳಗೆ ಕಲ್ಪಿಸಿ ಅವು ಹೊರಬಂದು ಜನರಿಗೆ ತೊಂದರೆ ಮಾಡದಂತೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶಬಾಬು ಮಾತನಾಡಿ, ಜಿಲ್ಲೆಯ ಮೂರುಲಕ್ಷ ಹೆಕ್ಟೇರ್ ಭೂಪ್ರದೇಶದಲ್ಲಿ ಶೇ. ೪೨ರಷ್ಟು ಅರಣ್ಯ ಇದೆ. ಭದ್ರ ಅಭಯಾರಣ್ಯ ೫೦ಸಾವಿರ ಹೆಕ್ಟೇರ್‌ಗಳಷ್ಟಿದೆ. ಇಲ್ಲಿ ಒಟ್ಟಾರೆ ೪೦೦-೪೫೦ಆನೆಗಳಿವೆ. ಅದರಲ್ಲಿ ಆವಾಸಸ್ಥಾನ ಬಿಟ್ಟು ಸುಮಾರು ೫೦ಆನೆಗಳು ಮಾತ್ರ ಮುಕ್ತಸಂಚಾರ ಮಾಡುತ್ತಿವೆ. ಕಾಡಿನೊಳಗೆ ಅವುಗಳಿಗೆ ಆಹಾರ, ವಂಶಾಭಿವೃದ್ಧಿಗೆ ಸೂಕ್ತ ವಾತಾವರಣ ಇರುವುದರಿಂದ ಹೆಚ್ಚಿನ ಆನೆಗಳು ಆವಾಸದಲ್ಲೆ ಇವೆ. ಕಾಡಿನ ಅಂಚಿನಲ್ಲಿರುವ ಕಾಫಿತೋಟಗಳಲ್ಲಿ ಹಲಸು ಮತ್ತು ಬೈನೆ ಸೇರಿದಂತೆ ಉತ್ತಮ ಜಾತಿಯ ಹಣ್ಣಿನಮರಗಳು ಇದ್ದು, ಅದರ ರುಚಿಕಂಡ ಆನೆ ಮತ್ತಿತರ ವನ್ಯಜೀವಿಗಳು ಧಾಳಿ ನಡೆಸುತ್ತಿವೆ ಎಂದು ಮಾಹಿತಿ ನೀಡಿದರು.
ಹಿರಿಯ ಸಂಶೋಧನಾಧಿಕಾರಿ ದಿಲೀಪಕುಮಾರ್ ಆನೆಗಳ ಜೀವನಕ್ರಮದ ವಿಡೀಯೋ ಪ್ರದರ್ಶಿಸಿ ದೇಶದಲ್ಲಿ ೨೯ ಸಾವಿರ ಆನೆಗಳಿವೆ. ರಾಜ್ಯದಲ್ಲಿ ೬,೩೯೦ಆನೆಗಳಿವೆ ಎಂದು ಸಮೀಕ್ಷಾ ವರದಿ ಹೇಳಿದೆ. ಬಂಡೀಪುರದಲ್ಲಿ ಅತಿಹೆಚ್ಚು, ದಾಂಡೇಲಿ ಕಾಡಿನಲ್ಲಿ ಅತಿಕಡಿಮೆ ಆನೆಗಳಿವೆ ಎಂದು ವಿವರಿಸಿದರು.
ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎಂ.ಎಲ್.ಸುಜಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಒನ್‌ಅರ್ಥ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಸಿ.ವಿ.ಭರತ್, ಕಾಫಿಮಂಡಳಿ ಅಧ್ಯಕ್ಷ ದೇವವೃಂದ ದಿನೇಶ್, ಕೊಪ್ಪ ಉಪಸರಣ್ಯ ಸಂರಕ್ಷಣಾಧಿಕಾರಿ ನಂದೀಶ್, ಟ್ರಸ್ಟಿ ಬಿ.ಡಿ.ಚೈತ್ರಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net