ಸನಾತನ ಪರಂಪರೆ ತಿಳಿದು ಆಚರಿಸಿದರೆ ಫಲ ಪ್ರಾಪ್ತಿ

2 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸನಾತನ ಧರ್ಮದಲ್ಲಿ ಚಾಚು ತಪ್ಪದೇ ಬಂದ ಸಂಪ್ರದಾಯ ಹಾಗೂ ಪರಂಪರೆಗಳನ್ನು ಆಚರಿಸಿದಾಗ ಮಾತ್ರ ಕಾರ್ಯಸಿದ್ಧಿ ಮತ್ತು ಫಲ ಪ್ರಾಪ್ತಿಯಾಗುತ್ತದೆ ಎಂದು ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಅಭಿನವ ಶಂಕರಭಾರತೀ ಸ್ವಾಮೀಜಿ ಹೇಳಿದರು.

ನಗರದ ದಾನೇಶ್ವರಿ ನಗರದಲ್ಲಿನ ಅದ್ವೈತಿ ಪ್ರಬೋಧಕ ಸಂಘದ ಶ್ರೀರಾಮ ಪತಿವಾರ ದೇವಸ್ಥಾನ, ಶ್ರೀಶಂಕರ ವೇದ ಪಾಠ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪಾದ ಪೂಜೆ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ನಂತರ ಶ್ರೀ ವೇದ ಪಾಠ ಶಾಲೆ ವೀಕ್ಷಿಸಿದ ಶ್ರೀಗಳು, ಸಂಘದ ಕಾರ್ಯ ಶ್ಲಾನೀಯ. ಪಾಠ ಶಾಲೆಗೆ ಅಧ್ಯಾಪಕರನ್ನು ಒದಗಿಸುವುದಾಗಿ ತಿಳಿಸಿದರು. ಇದಕ್ಕೂ ಪೂರ್ವದಲ್ಲಿ ಕುಂಭ ಮೆರವಣಿಗೆ ಮೂಲಕ ಶ್ರೀಗಳಿಗೆ ಭವ್ಯ ಸ್ವಾಗತ ಕೋರಲಾಯಿತು.

ಸಂಘದ ಅಧ್ಯಕ್ಷ ರವಿ ದೇಶಪಾಂಡೆ ಮಾತನಾಡಿ, ಸಂಘ ನಡೆದು ಬಂದ ದಾರಿ ತಿಳಿಸಿದರು. ಇನ್ನು ಎರಡು ವರ್ಷವಾದರೆ ಸಂಘವು 50 ವರ್ಷ ಪೂರೈಸಲಿದೆ ಎಂದರು.

ಶ್ರೀಕಾಂತ ಮಂಗಸೂಳಿ ದಂಪತಿ ಪಾದಪೂಜೆ ನೆರವೇರಿಸಿದರು. ಸಂಘದ ಪದಾಧಿಕಾರಿಗಳಾದ ರಾಮಚಂದ್ರ ಆಶ್ರಿತ, ಸದಾನಂದ ಕುಂದಾಪುರ, ಸದಸ್ಯರು, ಶಾರದಾ ಭಜನಾ ಮಂಡಳಿ ಸದಸ್ಯರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net