ಸಮಯದ ಬೆಲೆ ಅರಿಯಲಿ

12KATAKOL1
Published on

ಕಟಕೋಳ: ಸಮಯವನ್ನು ಯಾರು ಸದುಪಯೋಗಪಡಿಸಿಕೊಂಡು ಕೆಲಸ ನಿರ್ವಹಿಸುತ್ತಾರೋ ಅವರಿಗೆ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ಅಂತಾರಾಷ್ಟ್ರೀಯ ಧ್ಯಾನ ತರಬೇತುದಾರ ಜೀವನ ಕಟಾವ ಹೇಳಿದರು.

ಸಮೀಪದ ಚಂದರಗಿಯ ಎಸ್​ಎಂ ಕಲೂತಿ ಸಂಯುಕ್ತ ಕ್ರೀಡಾ ವಸತಿ ಪ್ರೌಢಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ಟೆಮ್​ ಮ್ಯಾನೇಜ್ಮೆಂಟ್​ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಕೆಲಸವನ್ನು ಈಗಲೇ ಮಾಡಬೇಕು ಎಂಬ ಛಲ ನಮ್ಮಲ್ಲಿ ಇರಬೇಕು. ಸಮಯ ನಿರ್ವಹಣೆ ಮಾಡುವಾಗ ಸ್ವಯಂ ಶಿಸ್ತು ರೂಢಿಸಿಕೊಂಡರೆ ಬದುಕು ಸುಂದರವಾಗಿರುತ್ತದೆ. ಕ್ರೀಡಾಪಟುಗಳಿಗೂ ಸ್ವಯಂಶಿಸ್ತು ಅತಿ ಅವಶ್ಯ. ಯಾವುದೇ ಕೆಲಸವನ್ನು ಯೋಜನಾಬದ್ಧವಾಗಿ ಹಾಗೂ ಕ್ರಮಬದ್ಧವಾಗಿ ಕಾರ್ಯರೂಪಕ್ಕೆ ತರಬೇಕು. ನಾವು ಸಮಯಕ್ಕೆ ಗೌರವ ನೀಡಿದರೆ ಸಮಯ ನಮಗೆ ಗೌರವ ನೀಡುತ್ತದೆ ಎಂದು ಕಿವಿಮಾತು ಹೇಳಿದರು.

ನಿವತ್ತ ಡಿವೆಎಸ್ಪಿ ಎಸ್​.ಎಸ್​. ಮುರಗೋಡ, ಆಡಳಿತಾಧಿಕಾರಿ ಉದಯಕುಮಾರ ಕೋಟಿವಾಲೆ, ಪ್ರಾಚಾರ್ಯ ಪಾಂಡುರಂಗ ಪಾಟೀಲ, ಸಂತೋಷ ಮಿರಜ್ಕರ್​ ಉಪಸ್ಥಿತರಿದ್ದರು. ಐ.ಎಸ್​. ಸೂಳಿಬಾವಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net