

ಬೀರೂರು: ಹೊಸದಾಗಿ ಜಾರಿಗೆ ಬಂದ ಕಾನೂನುಗಳು ಹೊಸ ಯುಗಕ್ಕೆ ಜನರನ್ನು ಪರಿವರ್ತಿಸುತ್ತಿವೆ ಎಂದು ಕಡೂರು ಪೊಲೀಸ್ ತರಬೇತಿ ಶಾಲೆ ನಿರೀಕ್ಷಕ ಎಸ್.ಆರ್.ಶ್ರೀಧರ್ ತಿಳಿಸಿದರು.
ಬೀರೂರಿನ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಐಕ್ಯೂಎಸಿ, ಮಹಿಳಾ ದೌರ್ಜನ್ಯ ಮತ್ತು ಕಿರುಕುಳ ತಡೆ ಸಮಿತಿಯಿಂದ ಆಯೋಜಿಸಿದ್ದ ಹೊಸ ಅಪರಾಧ ಕಾನೂನು ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಹಕ್ಕು, ಕರ್ತವ್ಯ ಹಾಗೂ ರಕ್ಷಣಾ ಕಾಯ್ದೆಗಳನ್ನು ತಿಳಿದುಕೊಳ್ಳಬೇಕು. ಜತೆಗೆ ಜನತೆಗೆ ಕಾನೂನಿನ ಮಹತ್ವ ತಿಳಿಸಬೇಕು. ದುಶ್ಚಟಗಳಿಗೆ ಬಲಿಯಾಗದೆ ಗುರಿ ಸಾಧಿಸುವ ಹಾದಿಯಲ್ಲಿ ನಡೆಯಬೇಕು. ಹೊಸ ಅಪರಾಧಗಳನ್ನು ತಡೆಗಟ್ಟುವುದು, ಅಪರಾಧಗಳಿಗೆ ವಿಧಿಸುವ ಶಿಕ್ಷೆ, ವಹಿಸಬೇಕಾದ ಎಚ್ಚರಿಕೆ ಇತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು.
ಪ್ರಾಚಾರ್ಯ ಪ್ರವೀಣ್, ಸಹಾಯಕ ಪ್ರಾಧ್ಯಾಪಕಿ ಡಾ. ಎಸ್.ಮಂಜುಳಾ, ಸಹ ಪ್ರಾಧ್ಯಾಪಕ ಡಾ. ಬಿ.ಮಲ್ಲಿಕಾರ್ಜುನ್, ಎಲ್.ಎನ್.ಶೋಭಾ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.