

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ಹೋಬಳಿ ಬೆಳುವಳ್ಳಿ ಗ್ರಾಮದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜ್ಞಾನ ವಿಕಾಸ ಯೋಜನೆ ವತಿಯಿಂದ ಬುಧವಾರ ಪೌಷ್ಟಿಕ ಆಹಾರದ ಬಗ್ಗೆ ಗ್ರಾಮೀಣರಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಕ ಪ್ರಸನ್ನಕುಮಾರ್ ಸುರೆ ಮಾತನಾಡಿ, ಜನರು ಪೌಷ್ಟಿಕ ಆಹಾರದ ಮಹತ್ವ ಅರಿಯಬೇಕು, ಪ್ರತಿಯೊಬ್ಬರೂ ಸದೃಢವಾಗಿರಲು ಪೌಷ್ಟಿಕ ಆಹಾರ ಸೇವನೆ ಅಗತ್ಯ ಎಂದರು.
ಪೌಷ್ಟಿಕ ಆಹಾರಕ್ಕೆ ದುಬಾರಿ ಹಣವನ್ನು ತೆರಬೇಕಿಲ್ಲ, ನಮ್ಮಲ್ಲಿ ಲಭ್ಯವಿರುವ ಸಿರಿಧ್ಯಾನ, ತರಕಾರಿ, ಹಣ್ಣುಗಳನ್ನು ಕ್ರಮಬದ್ಧವಾಗಿ ಸೇವಿಸಿದರೆ ಸದೃಢ ಆರೋಗ್ಯ ಪಡೆಯಬಹುದು. ಆರೋಗ್ಯ ಪದ್ಧತಿಯಲ್ಲಿ ಆರೋಗ್ಯ ಸೂತ್ರವನ್ನು ಒಳಗೊಂಡಿದೆ. ಬಹುತೇಕ ಮಂದಿ ಜಂಕ್‌ಫುಡ್ ಹಾಗೂ ಹೆಚ್ಚು ಬಣ್ಣ ಬಣ್ಣದ ಆಹಾರ ಸೇವಿಸಲು ಬಯಸುತ್ತಾರೆ. ಇದು ಆಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.
ಸಮನ್ವಯಾಧಿಕಾರಿ ಕಲಾಶ್ರೀ, ಮೇಲ್ವಿಚಾರಕ ಪುಟ್ಟಸ್ವಾಮಿ, ಸೇವಾಪ್ರತಿನಿಧಿ ಆಶಾ ಇತರರಿದ್ದರು