ಜೋಡೆತ್ತುಗಳ ಮಹತ್ವ ಅರಿಯಿರಿ

Know the importance of joints
ಬಸವನಬಾಗೇವಾಡಿ ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿನ ವಿರಕ್ತಮಠದ ಗವಿ ತೋಟದ ಆವರಣದಲ್ಲಿ ಹಮ್ಮಿಕೊಂಡಿದ್ದ ಬಸವ ತತ್ವ ಪುನಶ್ಚೇತನ ಸಂಕಲ್ಪ ಸಮ್ಮೇಳನಕ್ಕೆ ಸಿದ್ಧಲಿಂಗ ಶ್ರೀಗಳು ಚಾಲನೆ ನೀಡಿದರು. ಬಸವರಾಜ ಬಿರಾದಾರ, ಈರಣ್ಣ ಪಟ್ಟಣಶೆಟ್ಟಿ, ಸಂಗನಗೌಡ ಪಾಟೀಲ ಇತರರಿದ್ದರು.
Published on

ಬಸವನಬಾಗೇವಾಡಿ: ಜೋಡೆತ್ತಿನ ಕೃಷಿ ನಾಶವಾಗುತ್ತಿರುವ ಪ್ರಸ್ತುತ ಕಾಲದಲ್ಲಿ ಜೋಡೆತ್ತಿನ ಕೃಷಿ ಅವಲಂಬಿತ ಉದ್ಯೋಗಗಳು ನಶಿಸಿಹೋಗುತ್ತಿವೆ ಎಂದು ಅಭಿ ೌಂಡೇಷನ್​ ಸಂಸ್ಥಾಪಕ ಬಸವರಾಜ ಬಿರಾದಾರ ಹೇಳಿದರು.

ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿನ ವಿರಕ್ತಮಠದ ಗವಿ ತೋಟದ ಆವರಣದಲ್ಲಿ ಅಭಿ ೌಂಡೇಷನ್​ ಹಾಗೂ ವಿರಕ್ತಮಠದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ತತ್ವ ಪುನಶ್ಚೇತನ ಸಂಕಲ್ಪ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ರೈತರು ಜೋಡೆತ್ತುಗಳ ಮಹತ್ವ ಅರಿತು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಭವಿಷ್ಯ ಜೋಡೆತ್ತಿನ ಕೃಷಿಕರ ಮೇಲಿದೆ. ಬಹು ಕಾಯಕಗಳಿಗೆ ಮೂಲ ಬೇರಾದ ಜೋಡೆತ್ತಿನ ಕೃಷಿಯನ್ನು ಉಳಿಸಿದರೆ ಮಾತ್ರ ಕಾಯಕಗಳಿಗೆ ಭದ್ರತೆ ಒದಗಿಸಲು ಸಾಧ್ಯ. ಜೋಡೆತ್ತುಗಳನ್ನು ಉಳಿಸಿ ಬೆಳೆಸಲು ಸರ್ಕಾರ ಪ್ರೋತ್ಸಾಹ ನೀಡುವ ಅಗತ್ಯತೆ ಇದೆ ಎಂದು ಹೇಳಿದರು.

ಸಿದ್ಧೇಶ್ವರ ಶ್ರೀಗಳ ಪ್ರೇರಣೆಯಿಂದ ಜೋಡೆತ್ತಿನ ಕೃಷಿ ಪುನಶ್ಚೇತನದ ಉದ್ದೇಶದಿಂದ ಸಿದ್ಧೇಶ್ವರರ ಜನ್ಮಸ್ಥಳ ಬಿಜ್ಜರಗಿಯಿಂದ ನಂದಿಯಾತ್ರೆಯನ್ನು ಆರಂಭಿಸಲಾಗಿತ್ತು.

ಈ ನಂದಿಯಾತ್ರೆಯಿಂದಾಗಿ ಅನೇಕ ಕಡೆಗಳಲ್ಲಿ ಜೋಡೆತ್ತು ಸಂರಣೆಗೆ ಅನೇಕ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 30 ಜೋಡೆತ್ತು ಸಂಗಳನ್ನು ರಚಿಸಲಾಗಿದೆ. ಜೋಡೆತ್ತುಗಳನ್ನು ಉಳಿಸಿದರೆ ಮಾತ್ರ ಮುಂದೆ ನಮಗೆ ಅನ್ನ ಸಂಪತ್ತು ಸಿಗುತ್ತದೆ ಎಂಬ ಜಾಗೃತಿ ಮೂಡಿಸುವುದು ಬಸವ ತತ್ವ ಪುನಶ್ಚೇತನ ಸಂಕಲ್ಪ ಸಮ್ಮೇಳನದ ಉದ್ದೇಶವಾಗಿದೆ ಎಂದು ಹೇಳಿದರು.

ಅಧ್ಯತೆ ವಹಿಸಿದ್ದ ರಾಜ್ಯ ಸಹಕಾರ ಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಪ್ರತಿಯೊಬ್ಬರೂ ಸಾಂಪ್ರದಾಯಿಕ ಕೃಷಿ ಪದ್ಧತಿಯ ಮಹತ್ವ ಅರಿತುಕೊಳ್ಳಬೇಕು.

ಎತ್ತುಗಳು ಸೇರಿದಂತೆ ದನಕರುಗಳನ್ನು ಸಾಕುವತ್ತ ಹೆಚ್ಚಿನ ಗಮನ ಹರಿಸಬೇಕು. ಜೋಡೆತ್ತುಗಳ ಮಹತ್ವ ತಿಳಿಸುತ್ತಿರುವ ಬಸವರಾಜ ಬಿರಾದಾರ ಅವರ ಕಾರ್ಯ ಶ್ಲಾನೀಯ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಮಾತನಾಡಿ, ವಾಣಿಜ್ಯ ಬೆಳೆಗೆ ಬೆನ್ನು ಹತ್ತಿರುವ ರೈತ ಭೂಮಿಗೆ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಸತ್ವ ಕಡಿಮೆಯಾಗುತ್ತಿದೆ.

ಹಿರಿಯರು ಹಾಕಿಕೊಟ್ಟಿರುವ ಕೃಷಿ ಪದ್ಧತಿಗೆ ಮತ್ತೆ ಮರಳಬೇಕು. ಅವರ ಜೀವನಶೈಲಿ ಅನುಸರಿಸಬೇಕು. ಪ್ರತಿ ಮನೆಯಲ್ಲೂ ಜೋಡೆತ್ತುಗಳನ್ನು ಕಟ್ಟುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಪಿ.ಕೆ.ಪಿ.ಎಸ್​ ಅಧ್ಯ ಸಂಗನಗೌಡ ಪಾಟೀಲ ಮಾತನಾಡಿ, ಎತ್ತುಗಳನ್ನು ಖರೀದಿಸುವ ರೈತರಿಗೆ ನಮ್ಮ ಬ್ಯಾಂಕ್​ನಿಂದ ಒಂದು ರೂ. ಬಡ್ಡಿ ದರದಲ್ಲಿ 2 ಲ ರೂ. ಸಾಲ ನೀಡಲಾಗುವುದು. ಆಕಳುಗಳನ್ನು ಖರೀದಿಸಲು 10 ಲ ರೂ. ವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಪ್ರತಿ ವರ್ಷ ಉತ್ತಮ ಆಕಳುಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಶಿವನಗೌಡ ಬಿರಾದಾರ, ರೈತ ಸಿದ್ರಾಮಪ್ಪ ಬಾಗೇವಾಡಿ, ಬಸವರಾಜ ಹಾರವಾಳ, ಬಸಣ್ಣ ದೇಸಾಯಿ, ಸಂಗಮೇಶ ಓಲೇಕಾರ, ಅಶೋಕ ಹಾರಿವಾಳ, ಶೇಖರ ಗೊಳಸಂಗಿ, ಸಂಗಣ್ಣ ಕಲ್ಲೂರ, ಉಮೇಶ ಹಾರಿವಾಳ, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಬಸವರಾಜ ಕೋನರಡ್ಡಿ ಇತರರಿದ್ದರು.
ಎಂ.ಬಿ.ಆದಿಗೊಂಡ ಸ್ವಾಗತಿಸಿದರು. ಎಚ್​.ಬಿ.ಬಾರಿಕಾಯಿ ನಿರೂಪಿಸಿದರು. ಶಿವಾನಂದ ಮಡಿಕೇಶ್ವರ ವಂದಿಸಿದರು.

ಜೋಡೆತ್ತುಗಳನ್ನು ಪೂಜೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ತಳಿರು ತೊರಣಗಳಿಂದ ಅಲಂಕಾರ ಮಾಡಿದ್ದ ಜೋಡೆತ್ತುಗಳ ಬಂಡಿಗಳ ಮೆರವಣಿಗೆಗೆ ವಿರಕ್ತಮಠದ ಆವರಣದಲ್ಲಿ ಗಣ್ಯರು ಚಾಲನೆ ನೀಡಿದರು.

ಪಟ್ಟಣದ ಪ್ರಮುಖ ಬಿದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ 200ಕ್ಕೂ ಹೆಚ್ಚು ಜೋಡೆತ್ತುಗಳ ಬಂಡಿಗಳು ಭಾಗವಹಿಸಿದ್ದವು.

ಮೆರವಣಿಗೆಯಲ್ಲಿ ಅಣ್ಣ ಬಸವಣ್ಣ, ಛತ್ರಪತಿ ಶಿವಾಜಿ ಮಹಾರಾಜ, ಶಿವಲಿಂಗೇಶ್ವರ ಶ್ರೀಗಳು, ಹನುಮಂತ ಮೂರ್ತಿಗಳು ಹಾಗೂ ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರ ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net