

ಕಡೂರು: ಪ್ರಪಂಚದ ಅತ್ಯುತ್ತಮ ಸಂವಿಧಾನ ಭಾರತದ್ದಾಗಿದ್ದು, ಪ್ರತಿಯೊಬ್ಬರೂ ಸಂವಿಧಾನದ ಮಹತ್ವ ಅರಿಯಬೇಕು ಎಂದು ಕಡೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯೋಗಾನಂದ್ ತಿಳಿಸಿದರು.
ತಾಪಂನಲ್ಲಿ ಭಾನುವಾರ ಡಾ. ಬಿ.ಆರ್.ಅಂಬೇಡ್ಕರ್ 133ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಬರೆದುಕೊಟ್ಟ ಸಂವಿಧಾನಕ್ಕೆ ಎಲ್ಲರೂ ಗೌರವ ನೀಡಬೇಕು. ಅಂಬೇಡ್ಕರ್ ದೇಶದಲ್ಲಿ ಸಮಾನತೆ ವ್ಯವಸ್ಥೆಗೆ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದರು.
ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ಅಂಬೇಡ್ಕರ್ ಅವರು ಸಮಾನತೆಯೊಂದಿಗೆ ನೀಡಿದ ಸಂವಿಧಾನವನ್ನು ಓದುವ ಮೂಲಕ ಅದರ ಮಹತ್ವ ಎಲ್ಲರಿಗೂ ತಿಳಿಸಬೇಕಿದೆ. ಸಂವಿಧಾನ ಪ್ರತಿಗಳನ್ನು ಸ್ನೇಹಿತ ಬಳಗ ಸೇರಿದಂತೆ ಎಲ್ಲರಿಗೂ ತಲುಪಿಸುವ ಅಭಿಯಾನ ನಡೆಸಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರಕುತ್ತಿದ್ದು, ನಾವೆಲ್ಲರೂ ಅಂಬೇಡ್ಕರ್ ಆದರ್ಶದ ಬದುಕನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ತಾಪಂ ಇಒ ಸಿ.ಆರ್.ಪ್ರವೀಣ್, ತಾಲೂಕು ಸಮಾಜ ಕಲ್ಯಾಧಿಣಾಕಾರಿ ಎಚ್.ಡಿ.ರೇವಣ್ಣ, ವಸತಿ ನಿಲಯದ ಮೇಲ್ವಿಚಾರಕ ಪ್ರಸನ್ನ ಸೋಮೇಶ್, ರಾಜು ಒಡೆಯರ್, ಕಾರ್ಮಿಕ ನಿರೀಕ್ಷಕಿ ಶಶಿಕಲಾ, ಸಿಡಿಪಿಒ ಶಿವಪ್ರಕಾಶ್, ಡಿಎಸ್‌ಎಸ್ ಹಿರಿಯ ಮುಖಂಡರಾದ ಶೂದ್ರಶ್ರೀನಿವಾಸ್, ಸಂತೋಷ್, ಬಿ.ಟಿ.ಚಂದ್ರಶೇಖರ್, ಬಿ.ಟಿ.ಗಂಗಾಧರ್‌ನಾಯ್ಕ, ಪ್ರಶಾಂತ್, ಲಕ್ಷ್ಮಣ್, ರಾಘವೇಂದ್ರ, ವಾಸು, ಬೀರೂರು ಎನ್.ಗಿರೀಶ್, ಕೃಷ್ಣಪ್ಪ, ಕೃಷ್ಣಮೂರ್ತಿ ಬಸವರಾಜ್, ಗಣೇಶ್, ಮಲ್ಲಿದೇವಿಹಳ್ಳಿ ಶ್ರೀನಿವಾಸ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.