

ಬೆಳಗಾವಿ: ರಾಣಿ ಕಿತ್ತೂರು ಚೆನ್ನಮ್ಮರನ್ನು ನೆನೆದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಿಸಲೇಬೇಕು. ಬ್ರಿಟಿಷ್ ವಿರುದ್ಧ ಹೋರಾಟದ ಕಿಚ್ಚು ಹಚ್ಚಿ ತಮ್ಮ ಬಲಿದಾನಗಳ ಮೂಲಕ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಇಂದಿನ ಯುವ ಸಮೂಹ ರಾಯಣ್ಣನ ಇತಿಹಾಸ ಅರಿತು ರಾಷ್ಟ್ರಪ್ರೇಮ ಬೆಳಸಿಕೊಳ್ಳಬೇಕು ಎಂದು ಬೈಲಹೊಂಗಲ ಶಾಸಕರು ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಅವರು ಕರೆ ನೀಡಿದರು.