ಮೂಲಭೂತ ಹಕ್ಕು-ಕರ್ತವ್ಯಗಳ ಅರಿಯಿರಿ

KURGODU Jatha
ಕುರುಗೋಡಿಗೆ ಸೋಮವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿ ಅದ್ದೂರಿ ಸ್ವಾಗತ ಕೋರಲಾಯಿತು.
Published on

ಕುರುಗೋಡು: ಬಾದನಹಟ್ಟಿಯಿಂದ ಸೋಮವಾರ ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಕ್ಕೆ ಜನಪ್ರತಿನಿಧಿಗಳು, ಪುರಸಭೆ ಮತ್ತು ಕಂದಾಯ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಗಣ್ಯರು ಅದ್ದೂರಿ ಸ್ವಾಗತ ಕೋರಿದರು.

ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಜಾಥಾ ಗೆಣಿಕೆಹಾಳ್ ರಸ್ತೆ ಸೇರಿ ವಿವಿಧ ರಸ್ತೆಗಳಲ್ಲಿ ಸಂಚರಿಸಿತು. ನಂತರ ಗೆಣಿಕೆಹಾಳ್, ಮುಷ್ಟಗಟ್ಟೆ, ವಿರಾಪುರ ಸೇರಿ ವಿವಿಧ ಹಳ್ಳಿಗಳಿಗೆ ತೆರಳಿತು.

ಸಂವಿಧಾನ ಜಾಥಾಕ್ಕೆ ಚಾಲನೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಮತಾ ಮಾತನಾಡಿ, ಸಂವಿಧಾನ ಸರ್ವ ವರ್ಗಗಳಿಗೆ ನ್ಯಾಯ ನೀಡಿದೆ. ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬರೂ ಅರಿಯಬೇಕು. ಸಂವಿಧಾನದ ಆಶಯದಂತೆ ನಡೆಯಬೇಕು ಎಂದು ಸಲಹೆ ನೀಡಿದರು. ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ, ಬಿಇಒ ಸಿದ್ದಲಿಂಗ ಮೂರ್ತಿ, ಪುರಸಭೆ ಅಧಿಕಾರಿ ಕೆ. ದುರುಗಣ್ಣ, ತಾಪಂ ಇಒ ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net