

ಚಿತ್ರದುರ್ಗ: ನಮ್ಮ ಸಂವಿಧಾನದ ಕುರಿತಂತೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ಜಿಲ್ಲಾಡಳಿತ,ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಅಂತಾ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ,ಭಾರತ ಸಂವಿಧಾನ ಪೀಠಿಕೆ ಜಾಗತಿಕ ವಾಚನ ಕಾರ‌್ಯಕ್ರಮ ಉದ್ಘಾಟಿಸಿ,ಡಾ.ಬಿ.ಆರ್.ಅಂಬೇಡ್ಕ ರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಚಿವರು ಮಾತನಾಡಿದರು.
ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತಕ್ಕೆ ಪವಿತ್ರ ಸಂವಿಧಾನ ಕೊಟ್ಟಿರುವ ಕೀರ್ತಿ ಅಂಬೇಡ್ಕರ್ ಅ ವರಿಗೆ ಸಲ್ಲುತ್ತದೆ ಹಾಗೂ ಅವರ ಕೊಡುಗೆಯನ್ನು ನಾವೆಲ್ಲರೂ ಸದಾ ಸ್ಮರಿಸಬೇಕಿದೆ. ವಿದ್ಯಾರ್ಥಿಗಳು,ನಾಗರಿಕರು ಸಂವಿಧಾನ ಸರಿಯಾಗಿ ತಿಳಿದು ಅದರ ಆಶಯಗಳನ್ನು ಅನುಸರಿಸಬೇಕಿದೆ ಎಂದರು.
ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಮಾತನಾಡಿ,ಪ್ರಜಾಪ್ರಭುತ್ವದಡಿ ಜೀವನ ನಡೆಸುತ್ತಿರುವ ನಾವು ನಮಗಿರುವ ಹಕ್ಕು, ಜವಾಬ್ದಾರಿಗಳನ್ನು ತಿಳಿಯಲು ಸಂವಿಧಾನವನ್ನು ಓದಬೇಕಿದೆ. ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವವಿರುವ ಭಾರತದ ಅಡಿಪಾಯ ನಮ್ಮ ಸಂವಿಧಾನ ಸ್ವತಂತ್ರವಾಗಿ ಬದುಕುವ ಎಲ್ಲ ಅವಕಾಶಗಳನ್ನು ನೀಡಿದೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಸಾಕಷ್ಟು ಅಧ್ಯಯನದೊಂದಿಗೆ ಅತ್ಯಂತ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ. 70 ವರ್ಷಗಳ ಹಿಂದೆ ದೇಶದಲ್ಲಿ ಪರಿಸ್ಥಿತಿ ಹೇಗಿತ್ತು ಎಂಬುದನ್ನು ತಿಳಿದರೆ,400ಕ್ಕೂ ಹೆಚ್ಚು ಆರ್ಟಿಕಲ್ಸ್,25 ಭಾಗಗಳು,12 ಷೆಡ್ಯೂಲ್‌ಗಳಿರುವ ಸಂವಿಧಾನದ ಮಹತ್ವ ಏನೆಂಬುದು ಗೊತ್ತಾಗುತ್ತದೆ. ಹಲವು ದೇಶಗಳ ಸಂವಿಧಾನಗಳ ಕೂಲಂಕಷ ಅಧ್ಯಯನದೊಂದಿಗೆ ಹಗಲು,ರಾತ್ರಿ ಶ್ರಮಿಸಿ ಅಂ ಬೇಡ್ಕರ್ ಅವರರ ಸಂವಿಧಾನ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ವೇದಾಂತ್ ಅವರು,ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಭಾರತವನ್ನು ಕಟ್ಟು ಜವಾಬ್ದಾರಿ, ಹೊಣೆಗಾರಿಕೆ ಅಂಬೇಡ್ಕರ್ ಅವರ ಮೇಲಿತ್ತು. ಬ್ರಿಟಿಷರಿಂದಾಗಿ ಭಾರತ ಒಡೆದ ಮನೆಯಾಗಿತ್ತು. ಅನೇಕ ಧರ್ಮ,ಜಾತಿಗಳು,ಲಿಂಗ ತಾ ರತಮ್ಯ,ದ್ವೇಷ ಮತ್ತು ಪ್ರಾದೇಶಿಕ ಅಸಾಮಾನತೆಯಿಂದ ಕೂಡಿದ್ದ ದೇಶವನ್ನು ಬಹುತ್ವದ ಭಾರತವನ್ನಾಗಿ ರೂಪಿಸಲು ಅಂಬೇಡ್ಕರ್ ಸಂವಿಧಾನದ ಮೂಲಕ ನೆರವಾಗಿದ್ದಾರೆ. ಇಡೀ ಸಂವಿಧಾನವೆ ಅಡಕವಾಗಿರುವ ಹಾಗೆ ಪೀಠಿಕೆ ರಚಿಸಿದ್ದಾರೆ ಎಂದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್,ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ,ತಹಸೀಲ್ದಾರ್ ಡಾ.ನಾಗವೇಣಿ,ಸಮಾಜ ಕಲ್ಯಾಣ ಇ ಲಾಖೆ ಉಪ ನಿರ್ದೇಶಕ ಜಗದೀಶ್‌ಹೆಬ್ಬಳ್ಳಿ,ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಒ.ಪರಮೇಶ್ವರಪ್ಪ,ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀ ರ್,ನಗರಸಭೆ ಮಾಜಿ ಅಧ್ಯಕ್ಷರಾದ ನಿರಂಜನಮೂರ್ತಿ,ಡಿ.ಎನ್.ಮೈಲಾರಪ್ಪ,ಆಯುಕ್ತೆ ಎಂ.ರೇಣುಕಾ,ರವಿ,ವಕೀಲ ರವಿಕುಮಾರ್,ರಾ ಜಣ್ಣ,ಕುಮಾರಸ್ವಾಮಿ,ಖಾದಿರಮೇಶ್,ನರೇನಹಳ್ಳಿಅರುಣ್‌ಕುಮಾರ್,ಸಂಪತ್ ಮತ್ತಿತರರು ಇದ್ದರು. ಕಾರ‌್ಯಕ್ರಮದ ಅಂಗವಾಗಿ ಭಾರತ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರೂ ಸಂವಿಧಾನದ ಪೀಠಿಕೆ ವಾಚಿಸಿ,ಪ್ರತಿಜ್ಞಾ ವಿಧಿ ಸ್ವೀಕರಿಸಿದರು.