ಚಾಕು ಇರಿದ ಆರೋಪಿಯ ಬಂಧನ

crime
Published on

ಹುಬ್ಬಳ್ಳಿ: ಜನ್ಮದಿನದ ಸಂಭ್ರಮದ ವೇಳೆ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಒಬ್ಬನಿಗೆ ಚಾಕು ಇರಿದ ಘಟನೆ ಶನಿವಾರ ತಡರಾತ್ರಿ ನವನಗರದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಾಜ್ ಎಂಬಾತನನ್ನು ಬಂಧಿಸಲಾಗಿದೆ.

ಘಟನೆಯಲ್ಲಿ ಜಬೀವುಲ್ಲಾ ಬಳ್ಳಾರಿ (35) ಚಾಕು ಇರಿತಕ್ಕೊಳಗಾಗಿದ್ದು, ಸಿರಾಜ್ (44) ಚಾಕು ಇರಿದವನು. ಗಾಯಾಳುವನ್ನು ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಪಿಎಂಸಿ ನವನಗರದ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net