

ಸಿಂಧನೂರು: ನಗರದ ತಾಲೂಕು ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆಗೆ ಮೊಣಕಾಲು ಮರುಜೋಡಣಾ ಶಸ್ತ್ರಚಿಕಿತ್ಸೆಯನ್ನು ಭಾನುವಾರ ಯಶಸ್ವಿಯಾಗಿ ಮಾಡಲಾಯಿತು.
ದೆಹಲಿ ಏಮ್ಸ್‌ನ ತಜ್ಞ ವೈದ್ಯ ವಿಜಯ ಕುಮಾರ್, ಡಾ.ತುಷಾರ್ ನಾಯಕ್, ಡಾ.ಸಲಾವುದ್ದೀನ್, ಡಾ.ಕೋನಿಕಾ ತಂಡವು ಮಹಿಳೆಗೆ ಬೆಳಗ್ಗೆಯಿಂದಲೇ ಶಸ್ತ್ರಚಿಕಿತ್ಸೆ ಕೈಗೊಂಡರು. ತಾಲೂಕು ಆಸ್ಪತ್ರೆಯಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಯನ್ನು ಇದೇ ಮೊದಲ ಸಲ ಕೈಗೊಳ್ಳುವ ಮೂಲಕ ರೋಗಿಗಳಲ್ಲಿ ಭರವಸೆ ಮೂಡಿಸಲಾಯಿತು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ, ಸಿಬ್ಬಂದಿ ಅನ್ನಪೂರ್ಣ, ತಿಮ್ಮೇಶ, ಶಿವನಮ್ಮ, ರಾಜಾವಲಿ, ಅಡವಿಕಾಂತ್, ಅನಿಲ್‌ಕುಮಾರ್, ರಾಜೇಶ ಇದ್ದರು. ಮೊಣಕಾಲು ಮರುಜೋಡಣೆ ಶಸ್ತ್ರಚಿಕಿತ್ಸೆ ಕೈಗೊಂಡಿರುವ ರಾಜ್ಯದ ಮೊದಲ ಸರ್ಕಾರಿ ಆಸ್ಪತ್ರೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯಕ್ಕೆ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಶ್ಲಾಘಿಸಿದ್ದಾರೆ ಎಂದು ಡಾ.ನಾಗರಾಜ ತಿಳಿಸಿದರು.