ಫೋರ್ಟಿಸ್ ಆಸ್ಪತ್ರೆಯಲ್ಲಿ ರೊಬೊಟಿಕ್ ಸರ್ಜರಿ,  ಮೊಳಕಾಲು ಶಸ್ತ್ರಚಿಕಿತ್ಸೆಯಲ್ಲಿ ಮುಂಚೂಣಿ

IMG_20250218_131956_250.jpg
Published on

ಹುಬ್ಬಳ್ಳಿ: ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯು ರೊಬೊಟಿಕ್ ಸರ್ಜರಿಯಲ್ಲಿ ಮುಂಚೂಣಿಯಲ್ಲಿದ್ದು, ಇದುವರೆಗೂ ದೇಶ ವಿದೇಶದ 2 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಮೊಳಕಾಲು ಬದಲಿ (ಜಾಯಿಂಟ್ ರಿಪ್ಲೇಸ್ಮೆಂಟ್) ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಆಥೋರ್ಪೆಡಿಕ್ಸ್, ಮೂಳೆಚಿಕಿತ್ಸೆ ವಿಭಾಗದ ನಿರ್ದೇಶಕ ಡಾ. ನಾರಾಯಣ ಹುಲ್ಸೆ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಥಿಸಂಧಿವಾತ, ರುಮಟಾಯ್ಡ್ ಸಂಧಿವಾತ ಮತ್ತು ಕ್ಷೀಣಗೊಳ್ಳುವ ಕೀಲು ನೋವಿನಂತಹ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡುವಲ್ಲಿ ಫೋರ್ಟಿಸ್ ಆಸ್ಪತ್ರೆ ಬಹಳಷ್ಟು ಆಧುನಿಕತೆ ಅಳವಡಿಸಿಕೊಂಡಿದೆ. ಉತ್ತರ ಕರ್ನಾಟಕ ಅದರಲ್ಲೂ ಹುಬ್ಬಳ್ಳಿ ಧಾರವಾಡ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಜರಿ ಮಾಡಿಸಿಕೊಂಡು ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದಾರೆ ಎಂದರು.

ಸಾಂಪ್ರದಾಯಿಕ ವಿಧಾನಗಳಲ್ಲಿ ಮಾಡುವ ಸರ್ಜರಿಗಳು ಫಲಿತಾಂಶದಲ್ಲಿ ಏರುಪೇರಾಗಬಹುದು. ಆದರೆ, ರೊಬೊಟಿಕ್ ಸಹಾಯದಿಂದ ಮಾಡುವ ಸರ್ಜರಿಯಲ್ಲಿ ನಿಖರತೆ ಇರುತ್ತದೆ. ಯಾವುದೇ ವ್ಯತ್ಯಾಸ ಆಗುವುದಿಲ್ಲ. ಶಸ್ತ್ರ ಚಿಕಿತ್ಸೆ ಮಾಡಿದ ಕೆಲವೇ ದಿನದಲ್ಲಿ ಎದ್ದು ನಡೆದಾಡಬಹುದು. ವಿಶೇಷ ಎಂದರೆ ಗಣ್ಯರು ಸೇರಿದಂತೆ ನೂರಕ್ಕೂ ಹೆಚ್ಚು ವೈದ್ಯರಿಗೆ ಈ ಚಿಕಿತ್ಸೆ ಮಾಡಿರುವುದು ಫೋರ್ಟಿಸ್ ನ ವಿಶೇಷತೆ ಎಂದರು.

ಮೊಳಕಾಲು ನೋವು, ಹಿಪ್ ಜಾಯಿಂಟ್ ತೊಂದರೆ ಇರುವವರಿಗೆ ವಯಸ್ಸಿಗೆ ತಕ್ಕಂತೆ ತಪಾಸಣೆ ನಡೆಸಿ ಭಾಗಶಃ ಜಾಯಿಂಟ್ ರಿಪ್ಲೇಸ್ಮೆಂಟ್ ಇಲ್ಲವೇ ಪೂರ್ಣ ರಿಪ್ಲೇಸ್ಮೆಂಟ್ ಸರ್ಜರಿ ಮಾಡಲಾಗುತ್ತದೆ. ಒಮ್ಮೆ ಸರ್ಜರಿ ಮಾಡಿದರೆ ಸರಾಸರಿ 25 ವರ್ಷ ಯಾವುದೇ ತೊಂದರೆ ಇಲ್ಲ ಎಂದರು.

ಮೊಳಕಾಲು ನೋವಿನಿಂದ ಬಳಲುತ್ತಿದ್ದ ತಮಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಡಾ. ನಾರಾಯಣ ಹುಲ್ಸೆ ಹಾಗೂ ಅವರ ವೈದ್ಯಕಿಯ ತಂಡ ಸರ್ಜರಿ ಮಾಡಿದ್ದು, ಇದೀಗ ಯಾವುದೇ ತೊಂದರೆ ಇಲ್ಲದೇ ಎಲ್ಲ ಕೆಲಸ ಮಾಡುತ್ತಿದ್ದೇವೆ. ಆಪರೇಶನ್ ಎಂದರೆ ಭಯ ಇತ್ತು. ಆದರೆ, ಸರ್ಜರಿ ಮಾಡಿಸಿಕೊಂಡವರನ್ನು ನೋಡಿ ಆತಂಕ ದೂರ ಆಗಿ ನಾವು ಕೂಡ ಮಾಡಿಸಿಕೊಂಡು ಉತ್ತಮ ಜೀವನ ನಡೆಸುತ್ತಿದ್ದೇವೆ ಎಂದು ಹುಬ್ಬಳ್ಳಿಯ ಶಶಿಕಲಾ ಹಾನಗಲ್, ಸುಲೋಚನಾ ಮನಸೂರ, ರಾಣೆಬೆನ್ನೂರಿನ ಚಿನ್ನಪ್ಪ ಅವರು ಅನಿಸಿಕೆ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net