ಪಕ್ಷಿಗಳ ದಾಹ ತಣಿಸಲು ಮುಂದಾದ ಕೆಎಂಪಿಕೆ ಟ್ರಸ್ಟ್

birds
Published on

ಮೈಸೂರು: ಬೇಸಿಗೆ ಸಂದರ್ಭದಲ್ಲಿ ಪಕ್ಷಿಗಳ ದಾಹ ತಣಿಸಲು ನಗರದ ಲಕ್ಷ್ಮೀಪುರಂನ ಮರಗಳಲ್ಲಿ ಕೆಎಂಪಿಕೆ ಟ್ರಸ್ಟ್ ಹಾಗೂ ಅರಿವು ಸಂಸ್ಥೆ ಅಳವಡಿಸಿರುವ ನೀರಿನ ಬಟ್ಟಲುಅನ್ನು ಶನಿವಾರ ಉದ್ಘಾಟಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ಈಗಾಗಲೇ ಟ್ರಸ್ಟ್ ವತಿಯಿಂದ ಎರಡು ತಿಂಗಳಿಂದ ನಗರದ ವಿವಿಧೆಡೆ ನೀರಿನ ಬಟ್ಟಲುಗಳನ್ನು ಇಡಲಾಗಿದೆ. ಮನುಷ್ಯನಿಗೆ ಹೇಗೆ ದಿನನಿತ್ಯದ ಬದುಕಿನಲ್ಲಿ ಆಹಾರ, ನೀರು, ಗಾಳಿ ಬೇಕೇ ಬೇಕು ಅದೇ ರೀತಿ ಪ್ರಾಣಿ ಪಕ್ಷಿಗಳಿಗೂ ಕೂಡ ಬೇಕು. ಆದರೆ, ಬರಗಾಲ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಎಲ್ಲೂ ನೀರು ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಪ್ಲಾಸ್ಟಿಕ್ ಬಟ್ಟಲು ಇಟ್ಟು ಪಕ್ಷಿಗಳಿಗೆ ನೀರುಣಿಸಲಾಗುತ್ತಿದೆ ಎಂದರು.

ಈ ಸಂದರ್ಭ ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ನಗರದ ನಿವಾಸಿಗಳಾದ ಗಿರೀಶ್ ರಾಮಮೂರ್ತಿ, ಎಸ್.ಎನ್. ರಾಜೇಶ್, ಶ್ರೀಕಾಂತ್ ಕಶ್ಯಪ್, ಬೈರತಿ ಲಿಂಗರಾಜು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net