

ಕೆ.ಎಂ.ದೊಡ್ಡಿ : ಪಾಲಕರು ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ನಿಗಾ ವಹಿಸಬೇಕು ಎಂದು ಭಾರತೀ ಕಾಲೇಜಿನ ಉಪನ್ಯಾಸಕಿ ಸರಿತಾ ಹೇಳಿದರು.
ಇಲ್ಲಿನ ಪ್ರಾರ್ಥನಾ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಮಾಂಟೆಸ್ಸರಿ ಮಕ್ಕಳಿಗೆ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು.ಬಡವರಿಗೆ ವಿದ್ಯೆಯೇ ಆಸ್ತಿ. ಶಿಕ್ಷಣವು ವಿದ್ಯಾರ್ಥಿಯ ಬದುಕನ್ನು ಬೆಳಗಿಸುತ್ತದೆ ಎಂದರು.
ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಸಂಸ್ಥೆಯ ಅಧ್ಯಕ್ಷ ರವಿ ಸಾವಂದಿಪುರ, ಕಾರ್ಯದರ್ಶಿ ಸೌಮ್ಯಾ ಕೃಷ್ಣ, ನಿರ್ದೇಶಕರಾದ ಹಾಗಲಹಳ್ಳಿ ಬಸವರಾಜು, ಎ. ವಿಜೇಂದ್ರ, ಶಿಕ್ಷಕಿಯರಾದ ಎಸ್.ಬಿ. ಅಶ್ವಿನಿ, ಪಿ. ಸವಿತಾ, ಡಿ.ಎಂ. ಸ್ಮಿತಾ, ಆರ್. ರಮ್ಯಾ ಮತ್ತಿತರಿದ್ದರು.