ಅಧ್ಯಯನದ ಕಡೆ ಹೆಚ್ಚಿನ ಗಮನ ಕೊಡಿ

8KMD-1
Published on

ಕೆ.ಎಂ.ದೊಡ್ಡಿ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್‌ಗಳನ್ನು ದೂರವಿರಿಸಿ ಅಧ್ಯಯನದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದು ಕನಕಪುರದ ಬಿಜಿಎಸ್ ವಿದ್ಯಾನಿಕೇತನ ಪ್ರಾಂಶುಪಾಲ ಆರ್. ಪ್ರಶಾಂತ್ ಹೇಳಿದರು. ಸಮೀಪದ ಅಣ್ಣೂರು ಗೇಟ್ ಬಳಿಯ ಜನನಿ ವಿದ್ಯಾ ಸಂಸ್ಥೆಯ ಜನನಿ ಜೋಗುಳ ವಾರ್ಷಿಕೋತ್ಸವ ಕಾರ್ಯಕ್ರಮ ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ಶಿಕ್ಷಣ ಪಡೆಯುವ ಸಂದರ್ಭದಿಂದಲೂ ವಿದ್ಯಾರ್ಥಿಗಳು ಮೊಬೈಲ್‌ಗೆ ಹೆಚ್ಚು ಹೆಚ್ಚು ಅಂಟಿಕೊಂಡರು. ಈಗಲೂ ಮೊಬೈಲ್ ಬಳಕೆಯಲ್ಲಿಯೇ ಕಾಲಹರಣ ಮಾಡುತ್ತಿರುವುದು ಬೇಸರಕರ ಎಂದರು. ಜನನಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿ.ಕೆ .ಜಗದೀಶ ಮಾತನಾಡಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳೂ ಮಕ್ಕಳಿಗೆ ಮುಖ್ಯ. ನಮ್ಮ ಸಂಸ್ಥೆ ವಿದ್ಯಾರ್ಥಿಗಳ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ ಎಂದರು.ಮುಖ್ಯ ಶಿಕ್ಷಕಿ ಬಿ.ಆರ್ ಸೌಮ್ಯಾ, ಬಿಜಿಎಸ್ ಶಾಲೆ ಮುಖ್ಯ ಶಿಕ್ಷಕ ರಂಜಿತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net