ಸಾಮಾಜಿಕ ಕಳಕಳಿ ಸೇವೆಗೆ ಸಹಕರಿಸಿ

22KMD-1
Published on

ಕೆ.ಎಂ.ದೊಡ್ಡಿ : ಸಾಮಾಜಿಕ ಕಳಕಳಿ ಇರಿಸಿಕೊಂಡು ಚಟುವಟಿಕೆಗಳನ್ನು ನಡೆಸಲು ನನಗೆ ಹಿರಿಯರು ಸಹಕಾರ ನೀಡಬೇಕು ಎಂದು ಭಾರತೀ ವಿದ್ಯಾ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಆಶಯ್ ಜಿ. ಮಧು ಹೇಳಿದರು.

ಸಮೀಪದ ಚಂದೂಪುರ ಸರ್ಕಲ್‌ನ ಹಾಗಲಹಳ್ಳಿ ಬಸವರಾಜೇಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಗೌರವ ಸ್ವೀಕರಿಸಿ ಮಾತನಾಡಿದರು. ನನ್ನ ತಾತ ಜಿ.ಮಾದೇಗೌಡರು ಜೀವನ ಪೂರ್ಣ ನಡೆಸಿದ ಹೋರಾಟಗಳೆಲ್ಲವೂ ನನಗೆ ಹೆಮ್ಮೆಯಾಗಿದ್ದು ಚೈತನ್ಯ ತುಂಬಿವೆ. ಅವರ ವಂಶದಲ್ಲಿ ಹುಟ್ಟಿದ್ದೇ ನನ್ನ ಪುಣ್ಯ ಎಂದರು. ಮೂರು ತಲೆಮಾರಿನ ಪೀಳಿಗೆಯವರನ್ನು ಒಟ್ಟಿಗೆ ಕರೆದೊಯ್ಯಲು ಪ್ರಾಮಾಣಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ನಮ್ಮ ಕುಟುಂಬದ ಹಿರಿಯರು ಕಟ್ಟಿದ ಹಲವು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸಮಾಜದ ಹಿತಕ್ಕಾಗಿ ಸೇವೆ ಮಾಡುತ್ತಿವೆ. ಹಿರಿಯರ ಹಾದಿಯಲ್ಲೇ ನಾನು ಸಾಗುತ್ತೇನೆ ಎಂದು ಹೇಳಿದರು.ಕಾವೇರಿ ನೀರಾವರಿ ನಿಗಮದ ನಿವೃತ್ತ ಇಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ ಮಾತನಾಡಿ, ಹಿರಿಯ ಮುತ್ಸದ್ದಿ ಜಿ.ಮಾದೇಗೌಡರು ಮಂಡ್ಯ ಜಿಲ್ಲೆಗೆ ನೀಡಿದ ಕೊಡುಗೆ ಅಪಾರ ಎಂದರು. ಎಸ್.ಐ. ಹೊನ್ನಲಗೆರೆ(ಚಂದೂಪುರ)ಶಿವಕ್ಷೇತ್ರ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಆರ್ಶೀವಚನ ನೀಡಿದರು.

ಮುಖಂಡರಾದ ಅಣ್ಣೇಸ್ವಾಮಿ, ಎಲ್‌ಐಸಿ ಕೆಂಪೇಗೌಡ, ಪುಟ್ಟಮಾದೇಗೌಡ, ಚಂದೂಪುರ ಪುನೀತ್, ಹಾಗಲ ಹಳ್ಳಿ ಪ್ರಭ, ಹೊಸೂರು ಅನಿಲ್, ಮುಡೀನಹಳ್ಳಿ ಅಪ್ಪಾಜಿ, ಪವನ್‌ಕುಮಾರ್, ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net