

ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗಿಯಾಗಿ ನಿವೃತ್ತರಾದ ಲ್ಯಾನ್ಸಿ ಡಿ’ಸೋಜ ಅವರನ್ನು ಕೆಎಂಸಿಯ ನಿರ್ಮಾಣ ಹಾಗೂ ನಿರ್ವಹಣೆ ವಿಭಾಗದ ವತಿಯಿಂದ ಇತ್ತೀಚೆಗೆ ಸನ್ಮಾನಿಸಿ, ಬೀಳ್ಕೊಡಲಾಯಿತು.
ಆಡಳಿತ ಕಚೇರಿಯ ಮ್ಯಾನೇಜರ್ ಧಮೇರ್ಂದ್ರ ಎಂ.ಪಿ., ಎಚ್. ಆರ್.ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಸತೀಶ್ ಶೆಟ್ಟಿ, ಹಣಕಾಸು ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್‌ಗಳಾದ ಮಧುಮತಿ ಎಚ್.ಎಸ್., ಹೇಮಾವತಿ ಭಂಡಾರಿ, ಎಂಜಿನಿಯರ್‌ಗಳಾದ ಶಿವರಾಜ್, ಹರಿಕೃಷ್ಣ ಆಳ್ವ, ಕಾರ್ಯನಿರ್ವಹಣಾಧಿಕಾರಿ ಭಾನುಕಲಾ ಉದಯ್, ಕಲಂದರ್ ಶಾಫಿ, ಸಂದೇಶ್ ಎ., ಯಶೋದಾ ಕೆ., ಶಿವರಾಮ್ ಎಸ್., ಪುಂಡಲೀಕ ರಾವ್ ಮತ್ತಿತರರು ಉಪಸ್ಥಿತರಿದ್ದರು.