

ಉಡುಪಿ: ರೆಡಿಯಾಲಾಜಿ ತಂತ್ರಜ್ನಾನ 21ನೇ ಶತಮಾನದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಬಹಳಷ್ಟು ಬೇಡಿಕೆ ಹೊಂದಿದೆ. ರೋಗಗಳನ್ನು ಬಹುಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಅತ್ಯಾಧುನಿಕ ಎಂಅರ್ಐ ಯಂತ್ರಗಳು ಸಹಾಯಕವಾಗಿವೆ ಎಂದು ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಹೇಳಿದರು.
ಬುಧವಾರ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ 3ಟೆಸ್ಲಾ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೈದ್ಯಕಿಯ ಶಿಕ್ಷಣದ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಅಳವಡಿಸಿಕೊಳ್ಳಲು ಮತ್ತು ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಮಾಹೆ ಸಂಸ್ಥೆ ನಿರಂತರ ಪ್ರಯತ್ನಿಸುತ್ತಿದೆ. ಇದರೊಂದಿಗೆ ಜನಸಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆಯೂ ಲಭ್ಯವಾಗಲಿದೆ ಎಂದರು.
ಮಣಿಪಾಲ ಶಿಕ್ಷಣ ಮತ್ತು ವೈದ್ಯಕಿಯ ಸಮೂಹದ ಮುಖ್ಯಸ್ಥ ಡಾ.ರಂಜನ್ ಆರ್. ಪೈ ಉದ್ಘಾಟಿಸಿದರು. ಗೌರವ ಅಥಿತಿಗಳಾಗಿ ಮಣಿಪಾಲ ಹೆಲ್ತ್ ಎಂಟರ್ ಪ್ರೈಸೆಸ್ ಪ್ರೈ ಲಿ. ಮುಖ್ಯಸ್ಥ ಡಾ.ಸುದರ್ಶನ್ ಬಲ್ಲಾಳ್, ಮಾಹೆ ಮಣಿಪಾಲದ ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ. ಡಿ. ವೆಂಕಟೇಶ್ ಮತ್ತು ಮೆಡಿಕಾ ಬಜಾರ್, ಮುಂಬೈ ಹಿರಿಯ ಉಪಾಧ್ಯಕ್ಷ ಹಾಗೂ ವ್ಯವಹಾರ ಮುಖ್ಯಸ್ಥ ವಿ.ಪಿ ತಿರುಮಲೈ, ಕೆ ಎಂ ಸಿ ಮಣಿಪಾಲ ಡೀನ್ ಡಾ.ಪದ್ಮರಾಜ್ ಹೆಗ್ಡೆ, ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮತ್ತು ವಿಕಿರಣ ರೋಗರ್ನಿಣಯಶಾಸ್ತ್ರ ವಿಭಾಗದ ಪ್ರಾದ್ಯಾಪಕಿ ಮತ್ತು ಮುಖ್ಯಸ್ಥೆ ಡಾ.ಪ್ರಕಾಶಿನಿ ಕೆ., ಮಾಹೆ ಮಣಿಪಾಲದ ಸಿ ಓ ಓ ಸಿ.ಜಿ ಮುತ್ತಣ್ಣ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿ ಓ ಓ -ಡಾ.ಆನಂದ್ ವೇಣುಗೋಪಾಲ್ ಉಪಸ್ಥಿತರಿದ್ದರು.
ರೇಡಿಯೋ ಡಯಾಗ್ನೋಸಿಸ್ ವಿಭಾಗದ ಪ್ರಾಧ್ಯಾಪಕ ಡಾ.ರಾಜಗೋಪಾಲ್ ಕೆ.ವಿ. ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಪ್ರಿಯಾ ಜಯರಾಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.