ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆಫ್ಟರ್ ಕಂಪ್ಲೀಷನ್ ಥೆರಪಿ ಕ್ಲಿನಿಕ್ ಪ್ರಾರಂಭ

udp-8-kmc
Published on

ಉಡುಪಿ: ಕ್ಯಾನ್ಸರ್ ನಿಂದ ಬದುಕುಳಿದವರು ಚಿಕಿತ್ಸೆಯ ತಡ ಪರಿಣಾಮಗಳು ಮತ್ತು ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ವಿಶಿಷ್ಟ ಸಮಸ್ಯೆಗಳನ್ನು ಎದುರಿಸುವುದರಿಂದ ಸಮಗ್ರ ಆರೈಕೆ ಮತ್ತು ಚಿಕಿತ್ಸೆಗಾಗಿ ಥೆರಪಿ ಮುಗಿದ ನಂತರದ (ಆಫ್ಟರ್ ಕಂಪ್ಲೀಷನ್ ಥೆರಪಿ ) ಕ್ಲಿನಿಕ್ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮುಂಬೈ ಸಹಯೋಗದೊಂದಿಗೆ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದಲ್ಲಿ ಗುರುವಾರ ಪ್ರಾರಂಭಿಸಲಾಯಿತು.

ಅತಿಥಿಯಾಗಿದ್ದ ವೈದ್ಯಕೀಯ ವ್ಯವಹಾರ, ಭಾರತೀಯ ಕ್ಯಾನ್ಸರ್ ಸೊಸೈಟಿ ಮುಂಬೈ ಡೆಪ್ಯುಟಿ ಡೈರೆಕ್ಟರ್ ಜನರಲ್ ಡಾ.ವಂದನಾ ಧಮಾನ್ಕರ್ ಕ್ಲಿನಿಕ್ ಉದ್ಘಾಟಿಸಿದರು. ವಿಭಾಗದ ಸಹಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ವಾಸುದೇವ ಭಟ್ ಮಾತನಾಡಿ, ಬಾಲ್ಯದ ಕ್ಯಾನ್ಸರ್ ಪೀಡಿತರು ದೇಶದ ಭವಿಷ್ಯದ ಪ್ರಜೆಗಳಾಗಿದ್ದು, ಅವರು ಸಾಮಾನ್ಯ, ಆರೋಗ್ಯಕರ ಮತ್ತು ಫಲದಾಯಕ ಜೀವನ ನಡೆಸುವುದು ಮುಖ್ಯ ಎಂದು ಹೇಳಿದರು.

ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಮಿನ್ ರಹಿಮಾನ್ ಮತ್ತು ಮನೋವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅಮೃತವರ್ಷಿಣಿ ವಿಶೇಷ ಚಿಕಿತ್ಸಾಲಯಗಳ ಅಗತ್ಯತೆಯ ಕುರಿತು ವಿವರಣೆ ನೀಡಿದರು. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಪದ್ಮರಾಜ್ ಹೆಗ್ಡೆ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಚನಾ ಎಂ.ವಿ ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಸ್ಥಾನಿಕ ವೈದ್ಯೆ ಡಾ.ಸ್ವಾತಿ ಪಿ.ಎಂ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net