ಮಣಿಪಾಲ ಸಮಗ್ರ ಕ್ಯಾನ್ಸರ್​ ಆರೈಕೆ ಕೇಂದ್ರಕ್ಕೆ ಯುಐಸಿಸಿ ಸದಸ್ಯತ್ವ

udp-20-kmc
Published on

ಉಡುಪಿ: ಮಣಿಪಾಲ ಕಸ್ತೂರ್ಬಾ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಯ ಸಮಗ್ರ ಕ್ಯಾನ್ಸರ್​ ಆರೈಕೆ ಕೇಂದ್ರಕ್ಕೆ(ಎಂಸಿಸಿಸಿಸಿ), ಯೂನಿಯನ್​ ಫಾರ್​ ಇಂಟರ್​ನ್ಯಾಷನಲ್​ ಕ್ಯಾನ್ಸರ್​ ಕಂಟ್ರೋಲ್​(ಅಂತಾರಾಷ್ಟ್ರೀಯ ಕ್ಯಾನ್ಸರ್​ ಕಂಟ್ರೋಲ್​ ಒಕ್ಕೂಟ ) ಸದಸ್ಯತ್ವ ದೊರೆತಿದೆ.

ಕ್ಯಾನ್ಸರ್​ ಆರೈಕೆ, ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಕ್ಯಾನ್ಸರ್​ ಆರೈಕೆ ಕೇಂದ್ರದ ಖ್ಯಾತಿ ಜಾಗತಿಕ ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಏರಿಕೆಯಾಗಿದೆ. ಇದರಿಂದ ಸಮಗ್ರ ಕ್ಯಾನ್ಸರ್​ ಆರೈಕೆ ಕೇಂದ್ರದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ತರಬೇತಿ ಅವಕಾಶಗಳಿಗೆ ನೇರ ಪ್ರವೇಶ ಪಡೆಯಲಿದ್ದಾರೆ.

ಯುಐಸಿಸಿ ಅಧ್ಯಕ್ಷ ಪ್ರೊ.ಜೆಫ್​ ಡನ್​ ಎಒ ಹಾಗೂ ಯುಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕ್ಯಾರಿ ಆಡಮ್ಸ್​ ಮಾತನಾಡಿ, ಯುಐಸಿಸಿ ಕುಟುಂಬಕ್ಕೆ ಮಣಿಪಾಲ ಸಮಗ್ರ ಕ್ಯಾನ್ಸರ್​ ಆರೈಕೆಯ ಸೇರ್ಪಡೆ ಉತಷ್ಟತೆಯ ಜಾಗತಿಕ ಮಾನದಂಡಗಳಿಗೆ ಅದರ ಬದ್ಧತೆಯನ್ನು ಸೂಚಿಸುತ್ತದೆ ಎಂದರು.
ಆರೈಕೆ ಕೇಂದ್ರದ ಉಪ ಸಂಯೋಜಕ ಡಾ.ವಾಸುದೇವ ಭಟ್​ ಕೆ. ಹಾಗೂ ಡಾ. ಶೆರ್ಲಿ ಸಾಲಿನ್ಸ್​ ಕ್ಯಾನ್ಸರ್​ ಆರೈಕೆಯ ಮಾನದಂಡಗಳನ್ನು ಉನ್ನತಿಕರಿಸುವ ನಮ್ಮ ಗುರಿಯನ್ನು ಸಾಧಿಸಿದ್ದೇವೆ. ಇಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಗುರುತಿಸಿಕೊಳ್ಳುವುದು ನಮ್ಮ ಕಾರ್ಯಕ್ಕೆ ಉತ್ತೇಜನ ನೀಡುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net