ಕೆಎಂಸಿ ಆಸ್ಪತ್ರೆ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

mng_13 feb KMC
ಜ್ಯೋತಿ ಸಮೀಪದ ಕೆಎಂಸಿ ಆಸ್ಪತ್ರೆ ಮಂಗಳೂರು ಹಾಗೂ ಲಯನ್ಸ್ ಕ್ಲಬ್ ಕದ್ರಿ ಸಹಯೋಗದಲ್ಲಿ ಕ್ಯಾನ್ಸರ್ ಬಗ್ಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಕನ್ಸಲ್ಟೆಂಟ್ ಹೆಮೆಟೊಲಾಜಿ ಡಾ. ಪ್ರಶಾಂತ ಬಿ, ರೇಡಿಯೇಶನ್ ಒನ್ಕೊಲಾಜಿಸ್ಟ್ ಡಾ. ಅಭಿಷೇಕ್ ಕೃಷ್ಣ, ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾಘಿರ್ ಸಿದ್ಧಿಕಿ ಸಹಿತ ಹಲವು ತಜ್ಞ ವೈದ್ಯರು ಕ್ಯಾನ್ಸರ್ ಬಗ್ಗೆ ಸಾರ್ವಜನಿಕ ಜಾಗೃತಿ ನೀಡಿದರು.
Published on

ಮಂಗಳೂರು: ಜ್ಯೋತಿ ಸಮೀಪದ ಕೆಎಂಸಿ ಆಸ್ಪತ್ರೆ ಮಂಗಳೂರು ಹಾಗೂ ಲಯನ್ಸ್ ಕ್ಲಬ್ ಕದ್ರಿ ಸಹಯೋಗದಲ್ಲಿ ಕ್ಯಾನ್ಸರ್ ಬಗ್ಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು.

ಕನ್ಸಲ್ಟೆಂಟ್ ಹೆಮೆಟೊಲಾಜಿ ಡಾ. ಪ್ರಶಾಂತ ಬಿ ಮಾತನಾಡಿ, ಕ್ಯಾನ್ಸರ್ ಜೀವಕೋಶಗಳು ಅನಿಯಂತ್ರಿತವಾಗಿ ವೇಗವಾಗಿ ದ್ವಿಗುಣಗೊಳ್ಳುತ್ತಾ ಹೋಗುತ್ತವೆ. ಈ ಜೀವಕೋಶಗಳು ಆರೋಗ್ಯ ಜೀವಕೋಶಗಳ ಜಾಗವನ್ನು ಆಕ್ರಮಿಸುತ್ತವೆ. ರೋಗಿಯೂ ಕ್ಯಾನ್ಸರ್ ಪತ್ತೆಯಾದ ಬಳಿಕ ಗೊಂದಲಕ್ಕೊಳಗಾಗುವುದರಿಂದ ಚಿಕಿತ್ಸೆಗೆ ಒಳಪಡುವುದರಲ್ಲೂ ತಡ ಮಾಡುತ್ತಾರೆ. ಆದರೆ ಆರಂಭಿಕ ಹಂತದಲ್ಲಿ ಶೀಘ್ರವಾಗಿ ಚಿಕಿತ್ಸೆ ಆರಂಭಿಸುವುದು ಬಹಳ ಮುಖ್ಯ ಎಂದರು.

ರೇಡಿಯೇಶನ್ ಒನ್ಕೊಲಾಜಿಸ್ಟ್ ಡಾ. ಅಭಿಷೇಕ್ ಕೃಷ್ಣ ಮಾತನಾಡಿ, ಆಹಾರವನ್ನು ಬೇಯಿಸುವಾಗ ಪ್ಲಾಸ್ಟಿಕ್ ಕಂಟೇನರ್‌ಗಳು ವಿಷಕಾರಿ ಕೆಮಿಕಲ್‌ಗಳನ್ನು ಬಿಡುಗಡೆ ಮಾಡುತ್ತವೆ. ಬಿಸ್ಫೆನೊಲ್ ಪಿಎ ಮತ್ತು ಫತಾಲೇಟ್ಸ್ ಕೆಮಿಕಲ್‌ಗಳು ಹಾಗೂ ಗ್ರೇಡ್ 4,6,7 ನ ಏಕಬಳಕೆಯ ಪ್ಲಾಸ್ಟಿಕ್‌ನಲ್ಲಿ ಕಂಡುಬರುವ ಮೈಕ್ರೋ ಪ್ಲಾಸ್ಟಿಕ್‌ಗಳು ಸ್ತನ, ಪ್ರೋಸ್ಟೇಟ್, ಶ್ವಾಸಕೋಶ ಹಾಗೂ ಕೋಲನ್ ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದರು.

ಕನ್ಸಲ್ಟೆಂಟ್ ಮೆಡಿಕಲ್ ಜೆನೆಟಿಕ್ಸ್ ಡಾ.ವಿವೇಕಾನಂದ ಭಟ್, ಆಸ್ಪತ್ರೆಯ ಮನೋಶಾಸ್ತ್ರಜ್ಞ ಡಾ. ಕೀರ್ತಿಶ್ರೀ ಸೋಮ್ಮಣ್ಣ, ಸರ್ಜಿಕಲ್ ಆನ್ಕೋಲಾಜಿಸ್ಟ್ ಡಾ. ಹರೀಶ್ ಇ, ಮೆಡಿಕಲ್ ಒನ್ಕೋಲಾಜಿಸ್ಟ್ ಡಾ. ಸನಲ್ ಫನಾರ್ಂಡೀಸ್, ಕನ್ಸಲ್ಟೆಂಟ್ ಸರ್ಜಿಕಲ್ ಒನ್ಕೊಲಾಜಿಸ್ಟ್ ಡಾ. ಕಾರ್ತಿಕ್ ಕೆ ಎಸ್, ಕನ್ಸಲ್ಟೆಂಟ್ ಬ್ರೆಸ್ಟ್ ಸರ್ಜನ್ ಡಾ. ಬಸಿಲಾ ಅಮೀರ್ ಅಲಿ, ಕನ್ಸಲ್ಟೆಂಟ್ ಪಿಡಿಯಾಟ್ರಿಕ್ ಹೆಮೆಟೊ-ಒನ್ಕೊಲಾಜಿ ಡಾ. ಹರ್ಷ ಪ್ರಸಾದ್, ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾಘಿರ್ ಸಿದ್ಧಿಕಿ ಸಹಿತ ಹಲವು ತಜ್ಞ ವೈದ್ಯರು ಕ್ಯಾನ್ಸರ್ ಬಗ್ಗೆ ಸಾರ್ವಜನಿಕ ಜಾಗೃತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net