ಸೆ.17ರಂದು ಹೃದಯದ ಆರೋಗ್ಯಕ್ಕಾಗಿ ವುಮೆನ್ ಆನ್ ವಾಕ್

kmc
Published on





ಮಂಗಳೂರು : ನಗರದ ಕೆಎಂಸಿ ಆಸ್ಪತ್ರೆ ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಸೆ.17ರಂದು ವುಮೆನ್ ಆನ್ ವಾಕ್
ಕಾರ್ಯಕ್ರಮ ನಡೆಯಲಿದೆ. ಪ್ರತ್ಯೇಕವಾಗಿ ಮಹಿಳೆಯರಿಗಾಗಿ ಆಯೋಜಿಸಿರುವ ಈ ನಡಿಗೆ ಕಾರ್ಯಕ್ರಮ ಬೆಳಗ್ಗೆ 6ಕ್ಕೆ
ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಆರಂಭಗೊಂಡು. ಅತ್ತಾವರದ ಕಪ್ರಿಗುಡ್ಡದಲ್ಲಿರುವ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸಮಾಪನಗೊಳ್ಳಲಿದೆ ಎಂದು ಕೆಎಂಸಿ ಆಸ್ಪತ್ರೆಯ ಹೃದಯ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಪೈ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೃದಯ ರೋಗ ಎನ್ನುವುದು ಪುರುಷರ ತೊಂದರೆ ಎಂಬ ಸಾಮಾನ್ಯ ತಪ್ಪು ಕಲ್ಪನೆ ಇದೆ. ಭಾರತದಲ್ಲಿ ಮಹಿಳೆಯರು ಕೂಡ ಗಮನಾರ್ಹ ಪ್ರಮಾಣದಲ್ಲಿ ಹೃದಯ ರೋಗದ ಅಪಾಯ ಹೊಂದಿರುವುದನ್ನು ಅಧ್ಯಯನಗಳು ಸಾಬೀತು ಪಡಿಸಿವೆ. ಮಹಿಳೆಯರ ಹೃದಯದ ಆರೋಗ್ಯ ಬಹಳ ಮುಖ್ಯ ಎಂಬ ಸಂದೇಶ ಸಾರಲು ಹಾಗೂ ಜಾಗೃತಿ ಮೂಡಿಸಲು ವುಮೆನ್ ಆನ್ ವಾಕ್ ಹಮ್ಮಿಕೊಳ್ಳಲಾಗಿದೆ. ಭಾಗವಹಿಸಲು ಇಚ್ಛಿಸುವವರು ವಾಟ್ಸಪ್ ಮೂಲಕ 9008167071 ರಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ನಡಿಗೆ ಸಂದರ್ಭ ಕೆಂಪು ಬಣ್ಣದ ಉಡುಪುಗಳನ್ನು ಧರಿಸಬೇಕು. ಕಾರ್ಯಕ್ರಮ ಮುಗಿದ ಬಳಿಕ ಕೆಎಂಸಿ ಆಸ್ಪತ್ರೆಗೆ ಹಿಂತಿರುಗಲು ಸಾರಿಗೆ ಸೌಲಭ್ಯ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಕೆಎಂಸಿಯ ಹಿರಿಯ ಹೃದಯ ರೋಗಶಾಸ್ತ್ರ ತಜ್ಞ ಡಾ. ಪದ್ಮನಾಭ ಕಾಮತ್, ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಹರೀಶ್ ರಾಘವನ್ , ಕಾರ್ಡಿಯೊ ಥೊರಾಕಿಕ್ ಎಂಡ್ ವ್ಯಾಸ್ಕುೃಲರ್ ಸರ್ಜರಿ ತಜ್ಞ ಡಾ. ಮಾಧವ ಕಾಮತ್ , ಹೃದಯದ ಎಲೆಕ್ಟ್ರೋಫಿಜಿಯೋಲೋಜಿಸ್ಟ್ ಡಾ. ಮನೀಶ್ ರೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net