ಕಸ್ತೂರ್ಬಾ ಮೆಡಿಕಲ್ ಕಾಲೇಜು ದಾದಿಯರ ದಿನಾಚರಣೆ

mng--15 may KMC Nurse day
Published on

ಮಂಗಳೂರು: ವೆನ್ಲಾಕ್ ಹಾಗೂ ಲೇಡಿಗೋಶನ್ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ನಸಿರ್ಂಗ್ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ಕಾಲೇಜಿನ ವೈದ್ಯಕೀಯ ಶಿಕ್ಷಣ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.


ಕಾರ್ಯಕ್ರಮ ಉದ್ಘಾಟಿಸಿದ ಕೆಎಂಸಿಯ ಅಸೋಸಿಯೇಟ್ ಡೀನ್ ಡಾ.ಸುರೇಶ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ನಸಿರ್ಂಗ್ ಸೇವೆ ಎಲ್ಲ ವೃತ್ತಿಗಳಿಗಿಂತ ಉನ್ನತವಾಗಿದ್ದು, ರೋಗಿಗಳನ್ನು ಉಪಚರಿಸುವ ನಿಟ್ಟಿನಲ್ಲಿ ದಾದಿಯರ ಸೇವೆ ಮಾದರಿಯಾಗಿದೆ ಎಂದರು.


ಕಾಲೇಜಿನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಅವರು ಮಾತನಾಡಿ, ಕೆಎಂಸಿಯ ದಾದಿಯರು ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಗಳಲ್ಲಿ ದಾಖಲಾಗುವ ಬಡ ರೋಗಿಗಳನ್ನು ವಿಶೇಷವಾಗಿ ಉಪಚರಿಸಿ, ಸಲ್ಲಿಸುತ್ತಿರುವ ಸೇವೆ ಸರ್ವ ಶ್ರೇಷ್ಟವಾದುದು ಎಂದು ಅಭಿನಂದಿಸಿದರು.


ಕಾಲೇಜಿನ ಆಡಳಿತ ಕಚೇರಿ ಮ್ಯಾನೇಜರ್ ಧಮೇರ್ಂದ್ರ ಎಂ.ಪಿ. ಶುಭ ಹಾರೈಸಿದರು. ವೆನ್ಲಾಕ್ ಆಸ್ಪತ್ರೆಯ ಕೆಎಂಸಿ ದಾದಿಯರ ಮೇಲ್ವಿಚಾರಕಿ ಮಾರ್ಗರೆಟ್ ಪಿಂಟೋ, ಕಾಲೇಜಿನ ವಿದ್ಯಾರ್ಥಿ ವಿಭಾಗ ಮುಖ್ಯಸ್ಥೆ ಭಾನುಕಲಾ ಉದಯ್, ಯಶೋದಾ ಕೆ., ರೋಸ್ ಮೇರಿ ಮತ್ತಿತರರು ಉಪಸ್ಥಿತರಿದ್ದರು.
ಶುಶ್ರೂಶಕಿ ವಿನೀತಾ ಜೀವಿತರಾಜ್ ಸ್ವಾಗತಿಸಿ, ಲೇಡಿಗೋಶನ್ ಆಸ್ಪತ್ರೆಯ ಕೆಎಂಸಿ ದಾದಿಯರ ಮೇಲ್ವಿಚಾರಕಿ ಮಲ್ಲಿಕಾ ಕೆ. ವಂದಿಸಿದರು. ಶುಶ್ರೂಶಕ ಅನಿಶ್ ಕಾರ್ಯಕ್ರಮ ನಿರೂಪಿಸಿದರು. ದಾದಿಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net