ಕೆಎಲ್‌ಎಸ್ ಜಿಐಟಿಗೆ ಮ್ಯಾಥ್‌ವರ್ಕ್ಸ್ ಮಾನ್ಯತೆ

21dvk 9
ಬೆಳಗಾವಿಯ ಕೆಎಲ್‌ಎಸ್ ಜಿಐಟಿಗೆ ಮ್ಯಾತ್‌ಲ್ಯಾಬ್ ಆ್ಯಂಡ್ ಸಿಮುಲಿಂಕ್ ಕ್ಯಾಂಪಸ್-ವೈಡ್ ಲೈಸೆನ್ಸ್‌ನ್ನು ಸಂಸ್ಥೆಗೆ ಹಸ್ತಾಂತರಿಸಲಾಯಿತು. ಭಾನು ಪ್ರಕಾಶ ದಿಕ್ಷೀತ ಬಿ.ಎನ್., ಡಾ. ಕುಲದೀಪ ಸಾಂಬ್ರೇಕರ, ಡಾ. ಸಂಜೀವ ಸಣ್ಣಕ್ಕಿ, ವಿ.ಎಂ. ದೇಶಪಾಂಡೆ, ಅನೀಶ ಬಾಮ್ಸನ್, ಜಹೀದ್ ವಾಸೀಮ್, ರಾಜೇಂದ್ರ ಬೆಳಗಾಂವಕರ ಇತರರಿದ್ದರು.
Published on

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಪ್ರಮುಖ ಇಂಜಿನಿಯರಿಂಗ್ ಸಂಸ್ಥೆಯಾದ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಸಂಸ್ಥೆ (ಕೆಎಲ್‌ಎಸ್ ಜಿಐಟಿ)ಗೆ ಮ್ಯಾಥ್ ವರ್ಕ್ಸ್ ಸಂಸ್ಥೆಯಿಂದ ಪ್ರತಿಷ್ಠಿತ ಮ್ಯಾತ್‌ಲ್ಯಾಬ್ ಆ್ಯಂಡ್ ಸಿಮುಲಿಂಕ್ ಕ್ಯಾಂಪಸ್-ವೈಡ್ ಲೈಸೆನ್ಸ್ ಮಾನ್ಯತೆ ದೊರೆತಿದೆ.

ಸಂಸ್ಥೆಯ ಜಾಗತಿಕ ಮಟ್ಟದ ಶೈಕ್ಷಣಿಕ ಹಾಗೂ ಸಂಶೋಧನಾ ವ್ಯವಸ್ಥೆಯಲ್ಲಿನ ಉತ್ತಮ ಶ್ರೇಣಿ ಮತ್ತು ಸಾಧನೆ ಗಮನಿಸಿ ಈ ಮಾನ್ಯತೆ ನೀಡಲಾಗಿದೆ.

ಈ ಮಾನ್ಯತೆಯೊಂದಿಗೆ ಕೆಎಲ್‌ಎಸ್ ಜಿಐಟಿ ಭಾರತದಲ್ಲಿನ 22 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಮತ್ತು ಎನ್‌ಐಆರ್‌ಎಫ್ ರ‌್ಯಾಂಕ್ ಪಡೆದ 25 ಅತ್ಯುತ್ತಮ ಶ್ರೇಣಿಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 23 ಸಂಸ್ಥೆಗಳೊಂದಿಗೆ ಶ್ರೇಷ್ಠ ಸಂಸ್ಥೆಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಮ್ಯಾತ್‌ಲ್ಯಾಬ್ ಆಧಾರಿತ ಬೋಧನಾ ವಿಧಾನ ಅಳವಡಿಸಿರುವ ಎಲೆಕ್ಟ್ರಾನಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (ಇಇಇ), ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ (ಇಸಿಎ), ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಸಿಎಸ್‌ಇ) ವಿಭಾಗಗಳಿಗೆ ಪ್ರಶಂಸನಾ ಪ್ರಮಾಣಪತ್ರ ನೀಡಲಾಯಿತು. ಈ ಸಾಧನೆಗೆ ಕಾರಣವಾಗಿರುವ ಅಧ್ಯಾಪಕರಿಗೆ ಮತ್ತು ಸಿಬ್ಬಂದಿಗೆ ಮಂಡಳಿ ಅಭಿನಂದಿಸಿದೆ. ಪ್ರಮಾಣಪತ್ರ ಹಸ್ತಾಂತರ ಸಂದರ್ಭದಲ್ಲಿ ಭಾನು ಪ್ರಕಾಶ ದಿಕ್ಷೀತ ಬಿ.ಎನ್., ಗೌರವ ಕುಲಕರ್ಣಿ, ಪರಮೇಶ್ವರ ಬಣಕಾರ, ಡಾ.ಕುಲದೀಪ ಸಾಂಬ್ರೇಕರ, ಡಾ.ಸಂಜೀವ ಸಣ್ಣಕ್ಕಿ, ವಿ.ಎಂ. ದೇಶಪಾಂಡೆ, ಅನೀಶ ಬಾಮ್ಸನ್, ಜಹೀದ್ ವಾಸೀಮ್, ರಾಜೇಂದ್ರ ಬೆಳಗಾಂವಕರ, ಯು.ಎನ್. ಕಾಲಕುಂದ್ರಿಕರ, ಡಾ.ಎಂ.ಎಸ್. ಪಾಟೀಲ, ಡಿ.ಎ. ಕುಲಕರ್ಣಿ, ಡಾ. ಸುಪ್ರಿಯಾ ಶಾನಬಾಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net