ಕೆಎಲ್​ಇ ತ್ಯಾಗ, ಸೇವೆ ಸ್ಮರಣೀಯ

h16-kle
Published on

ಹುಬ್ಬಳ್ಳಿ: ನಗರದ ಕೆಎಲ್​ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕೆಎಲ್​ಇ ಸಂಸ್ಥಾಪನಾ ದಿನವನ್ನು ಗುರುವಾರ ಆಚರಿಸಲಾಯಿತು.

ಸಂಸ್ಥಾಪಕ ಸರ್ಪ¤ಗಳಾದ ಅರಟಾಳು ರುದ್ರೇಗೌಡರು, ಎಚ್.ಎಫ್. ಕಟ್ಟಿಮನಿ, ಪಂಡಿತಪ್ಪ ಚಿಕ್ಕೋಡಿ, ಎಂ.ಆರ್. ಸಾಖರೆ, ಶಿ.ಶಿ. ಬಸವನಾಳ, ಬಿ.ಎಸ್. ಹಂಚಿನಾಳ, ವೀರಣಗೌಡ ಪಾಟೀಲ ಅವರ ಕೊಡುಗೆಯನ್ನು ಸ್ಮರಿಸಲೇಬೇಕು. ಈ ಸಂಸ್ಥೆ ಈಗ ದೇಶ-ವಿದೇಶದಲ್ಲೂ ಹರಡಿದೆ. ಇದಕ್ಕೆ ಮಹನೀಯರ ತ್ಯಾಗ, ನಿಸ್ವಾರ್ಥ ಸೇವೆ ಕಾರಣ. ಅವರು ಹಚ್ಚಿದ ಹಣತೆ ಎಲ್ಲರ ಬಾಳನ್ನು ಬೆಳಗುತ್ತಿದೆ ಎಂದು ಹಾರೋಗೇರಿಯ ವೃಷಭೇಂದ್ರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎಸ್. ಮಾಳಿ ಹೇಳಿದರು.

ಪ್ರಾಚಾರ್ಯ ಪೊ›.ಎಸ್.ಎಲ್. ಪಾಟೀಲ ಮಾತನಾಡಿ, ಯುವ ಜನತೆಗೆ ಸರ್ಪ¤ಗಳು ಪ್ರೇರಣೆಯಾಗಬೇಕು. ಅವರಂತೆ ತ್ಯಾಗ, ನಿಸ್ವಾರ್ಥ ಸೇವೆ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಡಾ. ದತ್ತು ವಾಘಮೋಡೆ, ಐಕ್ಯೂಎಸಿ ಕೋಆರ್ಡಿನೇಟರ್ ಗೀತಾ ಕರಾಡೆ, ಡಾ. ಸೌಮ್ಯ ಸಜ್ಜನ, ಪ್ರೊ. ಗೀತಾ ಕರಾಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net