ಕೆಎಲ್ಇ ತಾಂತ್ರಿಕ ವಿವಿಗೆ ನೇಮಕ, ಅಶೋಕ ಶೆಟ್ಟರ್ ಸಮಕುಲಾಧಿಪತಿ, ಪ್ರಕಾಶ ತೇವರಿ ಉಪಕುಲಪತಿ

Dr-1.jpg
Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ನೂತನ ಸಮ ಕುಲಾಧಿಪತಿಯಾಗಿ (ಪ್ರೊ ಚಾನ್ಸಲ್ಲರ್) ಡಾ. ಅಶೋಕ ಶೆಟ್ಟರ್ ಹಾಗೂ ಉಪಕುಲಪತಿಯಾಗಿ ಡಾ. ಪ್ರಕಾಶ ತೇವರಿ ಅವರನ್ನು ನೇಮಕ ಮಾಡಲಾಗಿದೆ.

ಉಪಕುಲಪತಿಯಾಗಿ ತಮ್ಮ ಅಧಿಕಾರವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಡಾ. ಅಶೋಕ ಶೆಟ್ಟರ್ ಅವರನ್ನು ಈ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಶೈಕ್ಷಣಿಕ ತಜ್ಞರು, ಆಡಳಿತದಲ್ಲಿ ನೈಪುಣ್ಯತೆ ಹೊಂದಿರುವ ಶೆಟ್ಟರ್ ಅವರು ಇಂಜಿನಿಯರಿಂಗ್ ಶಿಕ್ಷಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರ ಅನುಭವ ಹಾಗೂ ಆಡಳಿತದಲ್ಲಿನ ಹಿಡಿತ ವಿಶ್ವವಿದ್ಯಾಲಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ನಿರೀಕ್ಷಿಸಲಾಗಿದೆ.

ತೆರವಾದ ಉಪಕುಲಪತಿ ಸ್ಥಾನಕ್ಕೆ ಇಂಜಿನಿಯರಿಂಗ್ ಶಿಕ್ಷಣ ಹಾಗೂ ಸಂಶೋಧನೆಯಲ್ಲಿ 35 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಶಿಕ್ಷಣ ತಜ್ಞ ಪ್ರಕಾಶ ತೇವರಿ ಅವರನ್ನು ನೇಮಕ ಮಾಡಲಾಗಿದೆ.

ಕೆಎಲ್ಇ ತಾಂತ್ರಿಕ ವಿವಿ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು ಈ ನೇಮಕವನ್ನು ಸ್ವಾಗತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net