ಕೆಎಲ್‌ಇ ವೇಣುಧ್ವನಿಯಿಂದ ಹೃದಯಾಘಾತ ಜಾಗೃತಿ

09Jaggu5
ಬೆಳಗಾವಿ ಕೆಎಲ್‌ಇ ವೇಣುಧ್ವನಿ 90.4 ಎ್.ಎಂ. ಸಮುದಾಯ ಬಾನುಲಿ ಕೇಂದ್ರದಲ್ಲಿ ಶನಿವಾರ ನೇರ ಫೋನ್‌ಇನ್ ಕಾರ್ಯಕ್ರಮ ನಡೆಯಿತು. ಡಾ. ಮಾಧವ ಪ್ರಭು, ಮನಿಷಾ ಪಿ.ಎಸ್., ಮಂಜುನಾಥ ಪೈ ಇದ್ದರು.
Published on

ಬೆಳಗಾವಿ: ಸರಿಯಾದ ಮಾಹಿತಿ ಇದ್ದರೆ ಹೃದಯಾಘಾತದಿಂದ ಜೀವ ಉಳಿಸಿಕೊಳ್ಳಬಹುದು. ಒತ್ತಡದ ಜೀವನಶೈಲಿ ಮತ್ತು ಉತ್ತಮ ಆಹಾರ ಪದ್ಧತಿ ಅನುಸರಿಸಿ…

ಇದು ಬೆಳಗಾವಿ ಕೆಎಲ್‌ಇ ವೇಣುಧ್ವನಿ 90.4 ಎ್.ಎಂ. ಸಮುದಾಯ ಬಾನುಲಿ ಕೇಂದ್ರ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ನೇರ ಫೋನ್‌ಇನ್ ಕಾರ್ಯಕ್ರಮದಲ್ಲಿ ಶ್ರೋತೃಗಳಿಗೆ ಜಾಗೃತಿ ಮೂಡಿಸಿದ ರೀತಿ. ಬೆಳಗ್ಗೆ 10ರಿಂದ 11 ಗಂಟೆವರೆಗೆ ನಡೆದ ಕಾರ್ಯಕ್ರಮದಲ್ಲಿ ಜೆಎನ್‌ಎಂಸಿ ಪ್ರಾಧ್ಯಾಪಕ, ಕೆಎಲ್‌ಇ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಾಧವ ಪ್ರಭು ಜನರ ಪ್ರಶ್ನೆಗಳಿಗೆ ಉತ್ತರಿಸಿದರು. ಇತ್ತಿಚೀನ ದಿನಗಳಲ್ಲಿ ಭಾರತ ಸೇರಿ ವಿವಿಧ ದೇಶಗಳಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಒತ್ತಡದ ಜೀವನಶೈಲಿ ಮತ್ತು ಆಹಾರ ಪದ್ಧತಿ ಇದಕ್ಕೆ ಕಾರಣವಾಗಿದೆ. ಹೃದಯಾಘಾತವು ಮಾರಣಾಂತಿಕವಾಗಿ ಪರಿಣಮಿಸಿದೆ. ಎಷ್ಟೇ ಆರೋಗ್ಯವಂತ ವ್ಯಕ್ತಿಯಾಗಿದ್ದರೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಸರಿಯಾದ ಮಾಹಿತಿ ಇದ್ರೆ ಹೃದಯಾಘಾತದಿಂದ ಜೀವನ ಉಳಿಸಿಕೊಳ್ಳಬಹುದು ಎಂದರು. ಹೃದಯಾಘಾತ ಎಂದರೇನು? ಹೇಗೆ ಸಂಭವಿಸುತ್ತದೆ? ಕಾರಣ?, ಲಕ್ಷಣಗಳು?, ಪ್ರಥಮ ಚಿಕಿತ್ಸೆ ಏನು ಮಾಡಬೇಕು? ಹೃದಯಾಘಾತ ಮತ್ತು ಹೃದಯಸ್ತಂಭನ ಮಧ್ಯೆದ ವ್ಯತ್ಯಾಸದ ಕುರಿತು ಜಾಗೃತಿ ಮೂಡಿಸಿದರು. ನಿರ್ವಾಹಕಿ ಮನಿಷಾ ಪಿ.ಎಸ್., ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net