

ಬೆಳಗಾವಿ:ನಗರದ ಕೆಎಲ್ಇ ಸಂಸ್ಥೆಯ ಜೆಎನ್ಎಂಸಿ ಆವರಣದ ಶತಮಾನೋತ್ಸವ ಸಭಾಂಗಣದಲ್ಲಿ ಸೋಮವಾರ ಕೆಎಲ್ಇ ವಿಶ್ವವಿದ್ಯಾಲಯ (ಕಾಹೆರ್) 13ನೇ ಘಟಿಕೋತ್ಸವ ಸಮಾರಂಭ ಜರುಗಿತು.
2022-23ನೇ ಸಾಲಿನ ಅಂತಿಮ ವರ್ಷದ ಎಂ.ಎಸ್ಸಿ, ಎಂಬಿಬಿಎಸ್,ಬಿಎಎಂಎಸ್, ಬಿ.ಫಾಮ್೯, ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ರಾಜ್ಯಪಾಲ ತಾವರ್ ಚಂದ ಗ್ಲೆಹೋಟ್ ವಿತರಣೆ ಮಾಡಿದರು. ವಿವಿ ಚಾನ್ಸಲರ್, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಅಧ್ಯಕ್ಷ ಮಹಾಂತೇಶ ಕೌಜಲಗಿ ಇತರರಿದ್ದರು.