

ಹುಬ್ಬಳ್ಳಿ: ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು ಗ್ರಾಫಿಕ್ ಡಿಸೈನ್, ಯುಎಕ್ಸ್ ಹಾಗೂ ಯುಐ ವಿಷಯದಲ್ಲಿ ಮೌಲ್ಯವರ್ಧಿತ ಅಲ್ಪಾವಧಿ ಕೋರ್ಸ್ಗಳನ್ನು ಆರಂಭಿಸಿದೆ. ವೃತ್ತಿನಿರತರು, ಉದ್ಯೋಗಾಕಾಂಕ್ಷಿಗಳು, ಪದವೀಧರರು ಹಾಗೂ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.
ಪಠ್ಯಕ್ರಮವು ಗ್ರಾಫಿಕ್ ಡಿಸೈನ್ ಥಿಂಕಿಂಗ್, ಡಿಸೈನ್ ಡೆವಲಪಮೆಂಟ್, ಕಲರ್ ಸೈಕಾಲಜಿ, ಟೈಪೋಗ್ರಾಫಿ, ಲೇಔಟ್ ಡಿಸೈನ್, ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ. ನಿತ್ಯ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆವರೆಗೆ ತರಗತಿಗಳು ನಡೆಯಲಿವೆ. ವೃತ್ತಿನಿರತರಿಗೆ ಶನಿವಾರ ಹಾಗೂ ಭಾನುವಾರದ ಬ್ಯಾಚ್ಗಳಲ್ಲಿ ತರಗತಿಗಳನ್ನು ನಡೆಸಲಾಗುವುದು. ನೈಜವಾದ ಪ್ರಾಜೆಕ್ಟ್ಗಳಲ್ಲಿ ಭಾಗವಹಿಸುವಿಕೆಯೊಂದಿಗೆ ಪ್ರಾಯೋಗಿಕ ಅನುಭವಗಳನ್ನು ಒದಗಿಸುವ ರೀತಿಯಲ್ಲಿ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು.
ವಿದ್ಯಾರ್ಥಿಗಳಿಗೆ ಕೋರ್ಸ್ ಶುಲ್ಕದಲ್ಲಿ ಶೇ. 50ರಷ್ಟು ರಿಯಾಯಿತಿ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.