

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ರಾಜಸ್ಥಾನದ ಸಿರೋಹಿಯ ಮಾಧವ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ರೋಪ್ ಸ್ಕಿಪ್ಪಿಂಗ್ ಚಾಂಪಿಯನ್ಶಿಪ್ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿನಿ ಭೀಮಾಂಬಿಕಾ ನಸಬಿ ಸ್ಪೀಡ್ ಜಾಗರ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಫ್ರೀಸ್ಟೈಲ್ ತಂಡ ಸ್ಪರ್ಧೆಯಲ್ಲಿ ಭೀಮಾಂಬಿಕಾ ನಸಬಿ, ಗಾಯತ್ರಿ ಪಾಟೀಲ (ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗ) ಮತ್ತು ಮನಾಲಿ ನಾಯಕ್ (ಬಿಸಿಎ ಅಂತಿಮ ವರ್ಷ) ತಂಡ ಕಂಚಿನ ಪದಕ ಜಯಿಸಿದೆ.
ವಿದ್ಯಾರ್ಥಿಗಳ ಸಾಧನೆಗೆ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಡಾ. ಅಶೋಕ ಶೆಟ್ಟರ್, ಉಪಕುಲಪತಿ ಡಾ. ಪ್ರಕಾಶ ತೇವರಿ, ಕುಲ ಸಚಿವ ಡಾ. ಬಸವರಾಜ ಅನಾಮಿ, ಕ್ರೀಡಾ ಸಂಯೋಜಕ ಪೊ›. ವಿಜಯಕುಮಾರ ನಿಂಬಗಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.