ಕೆಎಲ್‌ಇ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

13Manajari1
Published on

ಮಾಂಜರಿ: ಸಮೀಪದ ಅಂಕಲಿ ಗ್ರಾಮದಲ್ಲಿರುವ ಕೆಎಲ್‌ಇ ಸಂಸ್ಥೆಯ ಶಾರದಾದೇವಿ ಕೋರೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

೪೦ ಕೆಜಿ ವಿಭಾಗದ ಜೋಡೊ ಕುಸ್ತಿ ಸ್ಪರ್ಧೆಯಲ್ಲಿ ಮಯೂರೇಶ ಕೋಟಿವಾಲೆ ಪ್ರಥಮ, ೩೬ ಕೆಜಿ ವಿಭಾಗದಲ್ಲಿ ರೇವತಿ ದೂರವೆ ಪ್ರಥಮ, ೫೫ ಕೆಜಿ ವಿಭಾಗದಲ್ಲಿ ತುಳಸಾಬಾಯಿ ಕಬಾಡಗೆ ಪ್ರಥಮ, ೭೦ ಕೆಜಿ ವಿಭಾಗದಲ್ಲಿ ದುಂಡವ್ವ ಕಮತೆ ಪ್ರಥಮ, ಕರಾಟೆ ಸ್ಪರ್ಧೆಯಲ್ಲಿ ೪೦ ಕೆಜಿ ವಿಭಾಗದಲ್ಲಿ ನಂದಿ ಕಂಬಳೆ, ೫೦ ಕೆಜಿ ವಿಭಾಗದಲ್ಲಿ ತಾನಾಜಿ ವಂಜೇರಿ ಪ್ರಥಮ, ೪೪ ಕೆಜಿ ವಿಭಾಗದಲ್ಲಿ ಸಂತೋಶ್ರೀ ಕೋಳಿ ಪ್ರಥಮ, ೫೨ ಕೆಜಿ ಟೆಕ್ವಾಂಡೊ ಸ್ಪರ್ಧೆಯಲ್ಲಿ ನಂದಿನಿ ಗೋಲ್ಲರ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಪ್ರಾಚಾರ್ಯ ಪಿ.ಎನ್.ತಳವಾರ, ದೈಹಿಕ ಶಿಕ್ಷಣ ಉಪನ್ಯಾಸಕ ವೈ.ಬಿ.ಮಾಚಕನೂರ ಹಾಗೂ ಆಡಳಿತ ಮಂಡಳಿ ಸದಸ್ಯರು, ಶಾಲಾ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net