ಪ್ಯಾರಾ ಸ್ವೀಮಿಂಗ್ ವರ್ಲ್ಡ್ ಸಿರೀಸ್‌ಗೆ ಕೆಎಲ್‌ಇ ವಿದ್ಯಾರ್ಥಿಗಳು

IMG20250207205506.jpg
Published on

ಬೆಳಗಾವಿ: ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಎಂಕಾಂ ಕೊನೆಯ ವರ್ಷದ ವಿದ್ಯಾರ್ಥಿ ಸಾಹಿಲ್ ರಾಜಾರಾಮ ಜಾಧವ ಹಾಗೂ ಬಿ.ಕಾಂ. ಅಂತಿಮ ವರ್ಷದ ಸುಮಿತ್ ಸುಧೀರ ಮುತಗೇಕರ ಆಸ್ಟ್ರೇಲಿಯಾದ ಮೆಲ್ಬೋರ್ನ್‌ದಲ್ಲಿ ಫೆ.11ರಿಂದ 16ರ ವರೆಗೆ ಜರುಗಲಿರುವ ಸಿಟಿ ಪ್ಯಾರಾ ಸ್ವೀಮಿಂಗ್ ವರ್ಲ್ಡ್ ಸಿರೀಸ್‌ಗೆ ಆಯ್ಕೆಯಾಗಿದ್ದಾರೆ. ಇಬ್ಬರು ಪ್ಯಾರಾ ಈಜು ಪಟುಗಳು 50 ಮೀ. ಬಟರ್ ಪ್ಲಾಯ್, 100 ಮೀ. ಫ್ರೀ ಸ್ಟೈಲ್, ಬ್ರೆಸ್ಟ್‌ಸ್ಟ್ರೋಕ್, 200 ಮೀ.ವೈಯುಕ್ತಿಕ ಮಿಡ್ಲೆಗಳಲ್ಲಿ ಸ್ಪರ್ಧೆ ನೀಡಲಿದ್ದಾರೆ. ಅಂತಾರಾಷ್ಟ್ರೀಯಮಟ್ಟದ ಪ್ಯಾರಾ ಸ್ವೀಮಿಂಗ್‌ಗೆ ಆಯ್ಕೆಯಾಗಿ ಕಾಲೇಜಿನ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಶುಕ್ರವಾರ ಅಭಿನಂದಿಸಿ, ಮಾರ್ಗದರ್ಶನ ನೀಡಿದರು. ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net