

ಚಿಕ್ಕೋಡಿ: ಕೆಎಲ್ಇ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸಿದ್ಧಪಡಿಸಿದ 2 ಪ್ರಾಜೆಕ್ಟಗಳು ರಾಜ್ಯ ವಿಜ್ಞಾನ ಮತ್ತು ತಂತ್ರ-ಜ್ಞಾ-ನ ಮಂಡಳಿ (ಕೆಎಸ್ಸಿಎಸ್ಟಿ) ಹಾಗೂ ಬೆಂಗಳೂ-ರಿ-ನ ಐ-ಐಎಸ್ಸಿ ಕ್ಯಾಂಪಸ್ -ಏರ್ಪಡಿಸಿದ್ದ ರಾಜ್ಯಮಟ್ಟದ 48ನೇ ಪ್ರಬಂಧ ಮಂಡನೆ ಸ್ಪರ್ಧೆಗೆ ಆಯ್ಕೆಯಾಗಿರುವುದು ಹೆಮ್ಮೆ ಎಂದು ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ ಹೇಳಿ-ದ-ರು.
ಇಲ್ಲಿ-ನ ಕೆಎಲ್ಇ ಇಂಜಿನಿಯರಿಂಗ್ ಕಾಲೇ-ಜಿ-ನ-ಲ್ಲಿ ಬುಧ-ವಾ-ರ ಮಾ-ತ-ನಾ-ಡಿದ ಅವರು, ಕಂಪ್ಯೂಟರ್ ಸಾಯಿ-ನ್ಸ್ ವಿಭಾಗದ ಡಾ. ಬಾಹುಬಲಿ ಅಕಿವಾಟೆ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಮಿನಾಜ್ ನದಾಫ್, ನವೀನ -ಪೂಜಾರಿ, ಪ್ರಜ್ವಲ ಸದಲಗೆ, ಪ್ರವಿಣ ಸಿಂಧೂರ ಸಿದ್ಧಪಡಿಸಿ-ದ "ಡಿ ಸೆಂಟ್ರಲೈಜಡ್ ಆರ್ಗನ್ ಡೊನೆಷನ್ ಯುಜಿಂಗ್ ಬ್ಲಾಕ್ ಚೈನ್ ಟೆಕ್ನಾಲಾಜಿ' ಪ್ರಾಜೆಕ್ಟ ಹಾಗೂ ಮೆಕ್ಯಾನಿಕಲ್ ವಿಭಾಗದ ಕುಮಾರ ಚೌಗಲಾ ಮತ್ತು ಡಾ. ವೀರ-ಣ್ಣ ಮೋದಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಸುದೀಪ ಇಟಿ, ವಿವೇಕಾನಂದ ಕೋಲಾರ, ದೀಪಕ ಮಾನೆ, ಸೌರಭ ಸಿದ್ದನೂರ್ಲೆ ಸಿದ್ಧಪಡಿಸಿರುವ "ಎಕ್ಸಪೆರಿಮೆಂಟಲ್ ಆಂಡ್ ನ್ಯುಮೆರಿಕಲ್ ಅನಾಲೆಸಿಸ್ ಆಫ್ ಗ್ರಾಫಿನ್, ಡಿಸ್ಟಿಲಡ್ ವಾಟಲ್ ಇಥಲಿನ್ ಗ್ಲೆಕಾಲ್ ಆನ್ ಫುಲ್ ಬಾಯಲಿಂಗ್ ಹಿಟ್ ಟ್ರಾನ್ಸಫರ್' ಪ್ರಾಜೆಕ್ಟ ಆಯ್ಕೆಯಾಗಿವೆ.
ಈ ವಿದ್ಯಾರ್ಥಿಗಳು ಆಗಸ್ಟ್ 1ಮತ್ತು 2ರಂದು ಶಿವಮೊಗ್ಗದಲ್ಲಿ ಜರುಗಲಿರುವ ರಾಜ್ಯಮಟ್ಟದ 48ನೇ ಪ್ರಭಂದ ಮಂಡನೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ತಿಳಿ-ಸಿ-ದ-ರು. ವಿದ್ಯಾ-ರ್ಥಿ-ಗ-ಳಿ-ಗೆ ಕೆಎಲ್ಇ ಸಂಸ್ಥೆ ಆಡಳಿತ ಮಂಡಳಿ, ಪ್ರಾಚಾರ್ಯ, ಶಿ-ಕ್ಷ-ಕ-ರು ಹಾಗೂ ಸಿಬ್ಬಂದಿ ಅಭಿ-ನಂದಿ-ಸಿ-ದ-ರು.