ಕೆಎಲ್​ಇ ಕಾಲೇಜ್​ ವಿದ್ಯಾಥಿರ್ಗಳಿಂದ ರೇಷ್ಮೆ ಕೃಷಿ ಸ್ಥಳಗಳಿಗೆ ಭೇಟಿ

25GDG05
Published on

ವಿಜಯವಾಣಿ ಸುದ್ದಿಜಾಲ ಗದಗ
ಕೈಗಾರಿಕೆ ಹಾಗೂ ಕೃಷಿ ಸ್ಥಳಗಳಿಗೆ ವಿದ್ಯಾಥಿರ್ಗಳು ಭೇಟಿ ನೀಡಿ ಪ್ರಾಯೋಗಿಕ ಜ್ಞಾನವನವನ್ನು ಪಡೆಯುವುದು ಶಿಣ ಒಂದು ಭಾಗವಾಗಿದೆ. ವಿದ್ಯಾಥಿರ್ಗಳಿಗೆ ಪ್ರಾಯೋಗಿಕ ಜ್ಞಾನವನ್ನು ನೀಡುತ್ತದೆ. ಪ್ರತಿಯೊಬ್ಬರು ತಮ್ಮ ಸ್ವಂತ ಅನುಭವಗಳಿಂದ ಮತ್ತು ಇತರರ ಅನುಭವದಿಂದ ಕಲಿಯಲು ಸಾಕಷ್ಟು ವ್ಯತ್ಯಾಸವಿದೆ. ಸ್ವಂತ ಅನುಭವಗಳು ಹೆಚ್ಚು ಜ್ಞಾನವನ್ನು ನೀಡುತ್ತವೆ ಎಂದು ಪ್ರೊ. ಸಂತೋಷ ಮೂರಶಿಳ್ಳಿ ತಿಳಿಸಿದರು.
ಕೆಎಲ್​ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲದ ಗೃಹ ವಿಜ್ಞಾನ ವಿಭಾಗದ ವಿದ್ಯಾಥಿರ್ನಿಯರು ಶಿರಹಟ್ಟಿ ಹಾಗೂ ಗದಗ ಸುತ್ತ ಮುತ್ತಲಿನ ರೇಷ್ಮೆ ಕೃಷಿಯ ೇತ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ದೇಶೀಯ ರೇಷ್ಮೆಹುಳುಗಳ, ಮರಿಹುಳುಗಳು, ಆಹಾರ ಪಾಲನೆ, ಪೋಷಣೆ ಕುರಿತಾಗಿ ಮಾಹಿತಿಯನ್ನು ನೀಡಿದರು. ನಮ್ಮ ಪರಿಸರದಲ್ಲಿ ಯಾವ ರೀತಿ ರೇಷ್ಮೆ ಹುಳುಗಳನ್ನು ಬೆಳೆಸಿ ಅವುಗಳಿಂದ ರೇಷ್ಮೆ ದಾರ ತಯಾರಿಸುವ ವಿಧಾನವನ್ನು ವಿವರಿಸಿದರು. ವಿದ್ಯಾಥಿರ್ಗಳು ಪ್ರಸ್ತುತ ರೇಷ್ಮೆ ಕೃಷಿಯ ಪದ್ಧತಿಯನ್ನು ಕಲಿತು ತಮ್ಮ ವಿದ್ಯಾಭ್ಯಾಸದ ನಂತರ ಯಾವ ರೀತಿ ಈ ಉದ್ಯೋಗವನ್ನು ಮಾಡಬಹುದು ಎಂದು ತಿಳಿಸಿದರು. ಇದರ ಜೊತೆಗೆ ಕಾಲಕಾಲಕ್ಕೆ ಹೊಸದಾಗಿ ವಿಕಸನಗೊಂಡ ತಂತ್ರಜ್ಞಾನಗಳನ್ನು ಬಳಸಿಕೊಂಡು ರೇಷ್ಮೆ ಕೃಷಿಯಿಂದ ತಮ್ಮ ಜೀವನೋಪಾಯವನ್ನು ಹೆಚ್ಚಿಸುವ ಲಾಭದಾಯಕ ಮಾರ್ಗದ ಬಗ್ಗೆ ವಿದ್ಯಾಥಿರ್ಗಳಿಗೆ ಮನವರಿಕೆ ಮಾಡಿಕೊಟ್ಟರು.
ಡಾ. ಎ. ಕೆ. ಮಠ, ಪ್ರೊ. ವೀಣಾ ತಿರ್ಲಾಪೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net