ಕೆಎಲ್​ಇ ಸಿಬಿಎ ಸಮಗ್ರ ಚಾಂಪಿಯನ್

kle cba
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಯೋಜಿಸಿದ್ದ ಚಕ್ರವ್ಯೂಹ-ರಾಷ್ಟ್ರ ಮಟ್ಟದ ವಾಣಿಜ್ಯ ಮತ್ತು ಮ್ಯಾನೇಜ್​ವೆುಂಟ್ ಫೆಸ್ಟ್​ನಲ್ಲಿ ಹುಬ್ಬಳ್ಳಿಯ ಕೆಎಲ್​ಇ ಸಂಸ್ಥೆಯ ಕಾಲೇಜ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ (ಸಿಬಿಎ) ಸಮಗ್ರ ಚಾಂಪಿಯನ್ ಆಗಿದೆ.

ಮಾರ್ಕೆಟಿಂಗ್ ವಿಭಾಗದಲ್ಲಿ ಪ್ರಣಮ್ ದೊಡಮನಿ-ಖುಷ್ ಮುಣೋಥ್ ಪ್ರಥಮ, ಫೈನಾನ್ಸ್ ವಿಭಾಗದಲ್ಲಿ ದೀವ್ ಜೈನ್ -ರಾಹುಲ ತಾಂಬೆ ಪ್ರಥಮ, ಮಾನವ ಸಂಪನ್ಮೂಲ ವಿಭಾಗದಲ್ಲಿ ಶ್ರಾವಣಿ ಮಲ್ಯ-ಬಾನ್ಸುರಿ ಪಟೇಲ್ ಪ್ರಥಮ ಸ್ಥಾನ ಪಡೆದರು. ಪ್ರಣವ ಲಿಂಗದಳ್ಳಿ ಉತ್ತಮ ಮ್ಯಾನೇಜರ್ ಪ್ರಶಸ್ತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net