ಹುಬ್ಬಳ್ಳಿ: ಮೊಬೈಲ್ ಮತ್ತು ಟಿವಿ ಬಳಕೆ ಮಿತವಾದರೆ ಮಾತ್ರ ಮಕ್ಕಳ ವರ್ತನೆ ಒಳ್ಳೆಯದಾಗಿರಲು ಸಾಧ್ಯ. ಈ ಬಗ್ಗೆ ಪಾಲಕರು ನಿಗಾ ವಹಿಸಬೇಕು ಎಂದು ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹೇಳಿದರು.
ನಗರದ ಎಂ.ಆರ್. ಸಾಖರೆ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಇಲ್ಲಿಯ ಮಂಜುನಾಥನಗರದ ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಯಂ ಪ್ರತಿಭೆಯಿಂದ ಮುಂದೆ ಬರಬೇಕು. ಆಸಕ್ತಿಯಿಂದ ಕಲಿಯಬೇಕು ಎಂದು ಸಲಹೆ ನೀಡಿದರು.
ಅತಿಥಿಗಳಾಗಿದ್ದ ಕಿಮ್ಸ್ ನಿರ್ದೇಶಕ ಎಸ್.ಎ್. ಕಮ್ಮಾರ, ಸಂಪತ್ತು ಎಷ್ಟೇ ಇದ್ದರೂ ಆರೋಗ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಪಾಲಕರು ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಬೇಕು. ಉತ್ತಮ ಸಂಸ್ಕಾರ ಹೇಳಿಕೊಡಬೇಕು. ಕ್ರೀಡೆ, ಮನರಂಜನೆಯಿಂದ ಆರೋಗ್ಯ ವೃದ್ಧಿಸಲು ಸಾಧ್ಯ ಎಂದು ಹೇಳಿದರು.
ಬಿಇಒ ಉಮೇಶ ಬೊಮ್ಮಕ್ಕನವರ, ಶಿಕರು ವಿದ್ಯಾರ್ಥಿಗಳನ್ನು ಹೊಸ ಜೀವನಕ್ಕೆ ಅಣಿಗೊಳಿಸಬೇಕು. ಶಾಲೆ ಮತ್ತು ಮನೆ ವಿದ್ಯಾಥಿರ್ಗಳನ್ನು ಬದಲಿಸುವ ಸ್ಥಳಗಳು ಎಂದರು.
ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ನೇಹಾ ಪವಾಡಶೆಟ್ಟಿ (ಶೇ. 97.2), ಚನ್ನಯ್ಯಾ ಹಿರೇಮಠ (95.6) ಹಾಗೂ ಕುಮುದಾ ಹಾದಿಮನಿ (95.4) ಅವರನ್ನು ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾಥಿರ್ಗಳಿಗೆ ಪ್ರಮಾಣ ಪತ್ರ ನೀಡಿ, ಅಭಿನಂದಿಸಲಾಯಿತು.
ಶೈಕ್ಷಣಿಕ ಸಾಲಿನ ಉತ್ತಮ ವಿದ್ಯಾರ್ಥಿ, ಗಗನ ಕೆ. ಹಾಗೂ ಉತ್ತಮ ವಿದ್ಯಾರ್ಥಿನಿ, ಅರಾ ಡಿ, ಉತ್ತಮ ಸವ್ಯಸಾಚಿ (ಆಲ್ರೌಂಡರ್)ಆಗಿ ಭವ್ಯಾ ಟಿ. ಹಾಗೂ ಅನಿಕಾ ಯು, ಉತ್ತಮ ಕ್ರೀಡಾಪಟುವಾಗಿ ಸಿದ್ಧಾಂತ ಟಿ, ಸಾನ್ವಿ ಎಸ್, ಉತ್ತಮ ಸಾಂಸ್ಕೃತಿಕ ಕಲಾವಿದೆ ಶ್ರೇಯಾ ಪಿ. ಹಾಗೂ ಶಾಲೆಯ ಜನರಲ್ ಹೌಸ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಗ್ರೀನ್ ಹೌಸ್ ಬಾಚಿಕೊಂಡಿದ್ದು, ಹೌಸ್ ನಾಯಕರಾದ ಗಗನ ಡಿ. ಮತ್ತು ಜಾನ್ಹವಿ ಕೆ. ಪ್ರಶಸ್ತಿ ಫಲಕ ಸ್ವೀಕರಿಸಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಶಾಲೆಯ ಪ್ರಾಚಾರ್ಯ ಜಗದೀಶ ಮರಳಿ ಅವರು ವಾಷಿರ್ಕ ವರದಿ ವಾಚಿಸಿದರು. ನೇಹಾ ಎಂ., ಶ್ರೇಯಾ ಎನ್, ಭವ್ಯಾ ಟಿ, ಹರ್ಷಿತ್ ಕೆ, ನವನೀತರಾಜ್ ವಿ, ರೀತ ಎಂ. ಕಾರ್ಯಕ್ರಮ ನಿರೂಪಿಸಿದರು.