ಕೆಎಲ್ಇ ನರ್ಸಿಂಗ್ ಕಾಲೇಜಿನ ಘಟಿಕೋತ್ಸವ

Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಇನ್ ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ನ 17ನೇ ಘಟಿಕೋತ್ಸವ "ಸ್ಪರ್ಶ- 2024' ಹಾಗೂ ವಾರ್ಷಿಕ ದಿನಾಚರಣೆ ಇತ್ತೀಚೆಗೆ ನಡೆಯಿತು.

ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನರ್ಸ್ ಗಳು ಆಸ್ಪತ್ರೆಯ ಬೆನ್ನೆಲೆಬು ಇದ್ದಂತೆ. ಶುಶ್ರೂಷಕರಿಗೆ ಭಾರಿ ಬೇಡಿಕೆ ಇದೆ. ವಿದೇಶದಲ್ಲಿಯೂ ಸೇವೆ ಸಲ್ಲಿಸುವ ಅವಕಾಶಗಳು ಒದಗಿ ಬರುತ್ತಿವೆ ಎಂದರು.

ಮಂಗಳೂರಿನ ಲಕ್ಷ್ಮಿ ಸ್ಮಾರಕ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಲಾರಿಸ್ಸಾ ಮಾರ್ಥಾ ಸ್ಯಾಮ್ಸ್ ಮಾತನಾಡಿ, ಉತ್ತಮ ಸಂಬಳ, ಒಳ್ಳೆಯ ಕೆಲಸದ ವಾತಾವರಣಕ್ಕಾಗಿ ಅನೇಕ ಶುಶ್ರೂಷಕರು ವಿದೇಶಕ್ಕೆ ಹೋಗಲು ಬಯಸುತ್ತಾರೆ. ಹಾಗಾಗಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇಲ್ಲಿಯೂ ಸುಧಾರಣೆ ತರಲು ಕ್ರಮ ಕೈಗೊಳ್ಳಬೇಕು ಎಂದರು.

ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಕೆಎಲ್ಇ ತಾಂತ್ರಿಕ ವಿವಿ ಕುಲಸಚಿವ ಪ್ರೊ. ಬಸವರಾಜ ಅನಾಮಿ ಮಾತನಾಡಿದರು.

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶ್ರೇಯಾಂಕ ಮತ್ತು ಚಿನ್ನದ ಪದಕ ಪಡೆದ ಪದವೀಧರರಾದ ಫೆಲೆಂಟಿನಾ ಜೇಮ್ಸ್, ಆಶಾ ಮೆಣಸಗಿ, ಪೃಥ್ವಿ ರೇವಣಕರ, ಸಂತೋಷ ಹತ್ತಿಕಟಗಿ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ 94 ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.
ಕೆಎಲ್ಇ ನರ್ಸಿಂಗ್ ಸೈನ್ಸ್ ಪ್ರಾಚಾರ್ಯ ಡಾ. ಸಂಜಯ ಪೀರಾಪುರ ಸ್ವಾಗತಿಸಿದರು. ಡಾ. ಸೋಮಶೇಖರಯ್ಯ ಕಲ್ಮಠ ವರದಿ ಮಂಡಿಸಿದರು. ವಾಣಿ, ಶೃತಿ ಕಾರ್ಯಕ್ರಮ ನಿರೂಪಿಸಿದರು. ಡಾ. ಆಶಾ ಭಾತಖಂಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net