ಕೆಎಲ್‌ಇ ವೈದ್ಯಕೀಯ ವಿವಿಯಲ್ಲಿ ಹೊಸ್ ಕೋರ್ಸ್ ಆರಂಭ

22kle
ಬೆಳಗಾವಿ ಕೆಎಲ್‌ಇ ಸಂಸ್ಥೆಯ ಕೆಎಲ್‌ಇ ಅಕಾಡೆಮಿ ಆ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಕಾಹೆರ್).
Published on

ಬೆಳಗಾವಿ: ನೀಟ್ ಪರೀಕ್ಷೆ ಇಲ್ಲದೆ ವೈದ್ಯಕೀಯ ಕೋರ್ಸ್‌ಗಳ ಮೂಲಕ ಪದವಿ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕೆಎಲ್‌ಇ ಸಂಸ್ಥೆಯ ‘ಕೆಎಲ್‌ಇ ಅಕಾಡೆಮಿ ಆ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಕಾಹೆರ್) ಎಲ್ಲ ಮಾದರಿ ಕೋರ್ಸ್‌ಗಳನ್ನು ರೂಪಿಸಿದೆ. ಸಹಾಯಕರು, ತಾಂತ್ರಿಕ ಸಿಬ್ಬಂದಿ ಸೇವೆಗೆ ಸಿದ್ಧಗೊಳಿಸುವ ಬಹುಬೇಡಿಕೆಯ ಕೌಶಲ ಆಧಾರಿತ ಅಲೈಡ್ ಕೋರ್ಸ್‌ಗಳು ಕಾಹೆರ್‌ನಲ್ಲಿವೆ.

ಅಲೈಡ್ ಕೋರ್ಸ್‌ಗಳ ಸುವರ್ಣಾವಕಾಶ: ಪದವಿ ಮತ್ತು ಸ್ನಾತಕೋತ್ತರ ಪದವಿ ಎರಡೂ ವಿಭಾಗದಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳು ಕಾಹೇರ್‌ನಲ್ಲಿವೆ. ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳಿಗೆ 16ಕ್ಕೂ ಅಕ ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳಿವೆ. ಬಿಎಸ್ಸಿ 3+1 ವರ್ಷದ ಕೋರ್ಸ್ಗ ಳಾಗಿದ್ದರೆ 3 ವರ್ಷದ ಎಂಎಸ್ಸಿ ಕೋರ್ಸ್ ಕಲಿಕೆಯಿಂದ ವಿಷಯತಜ್ಞ ಮತ್ತು ಪ್ರಾಧ್ಯಾಪಕರಾಗಲು ಸಾಧ್ಯವಿದೆ.

ಬಿಎಸ್ಸಿ ಅ್ಲೆಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳು: ‘ಮೆಡಿಕಲ್ ಲ್ಯಾಬ್ ಟೆಕ್ನಾಲಜಿ’, ರೇಡಿಯೋಗ್ರಾಫಿ, ಆಪ್ಟೊಮೆಟ್ರಿ, ಎಂಡೋಸ್ಕೋಪಿ ಟೆಕ್ನಾಲಜಿ, ನ್ಯೂರೊ ಸೈನ್ಸ್ ಟೆಕ್ನಾಲಜಿ, ರೇನಲ್ ಡೈಯಾಲೈಸಿಸ್ ಟೆಕ್ನಾಲಜಿ, ರೆಸ್ಪಿರೇಟರಿ ಕೇರ್ ಟೆಕ್ನಾಲಜಿ, ಕ್ಯಾನ್ಸರ್, ಹೃದಯ ರೋಗದಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆ ಸಂದಭರ್ದಲ್ಲಿ ಮಹತ್ವದ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿರುವುರಿಂದ ಅವುಗಳ ನಿರ್ವಹಣೆ ಮತ್ತು ತಜ್ಞ ವೈದ್ಯರ ಸಹಾಯಕ್ಕೆ ಸಹಾಯಕರನ್ನು ಸಷ್ಟಿಸುವ ‘ರೇಡಿಯೇಶನ್ ಥೆರಪಿ ಟೆಕ್ನಾಲಜಿ’ ಕೋರ್ಸ್‌ಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ.

ಉದ್ಯೋಗಾವಕಾಶಗಳ ಹೆಬ್ಬಾಗಿಲು: ಆಹಾರ, ಸೌಂದರ್ಯ ವಿಷಯಗಳ ಚಿಕಿತ್ಸೆಯಲ್ಲೂ ಕಾಸ್ಮೆಟಿಕ್ ಸೈನ್ಸ್, ಹೋಟೆಲ್ ಮ್ಯಾನೇಜ್‌ಮೆಂಟ್, ನ್ಯೂಟ್ರಿಷಿಯನ್ ಆ್ಯಂಡ್ ಡೈಯಟಿಕ್ಸ್ ಪದವಿಗಳಿಗೆ ವಿುಲ ಬೇಡಿಕೆಗಳಿವೆ. ಆರೋಗ್ಯ ವಿಭಾಗದ ಆಡಳಿತ ನಿರ್ವಹಣೆಗೆ ಮಾನವ ಸಂಪನ್ಮೂಲ ಸೃಷ್ಠಿಸಲು ‘ಬಯೋಸ್ಟ್ಯಾಟಿಕ್ಸ್ ಆ್ಯಂಡ್ ಪಾಪ್ಯುಲೇಶನ್ ಸೈನ್ಸ್, ‘ಬ್ಯಾಚುಲರ್ ಆ್ ಪಬ್ಲಿಕ್ ಹೆಲ್ತ್’ ಮತ್ತು ‘ಬ್ಯಾಚುಲರ್ ಆ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್’ ಪದವಿ ಕೋರ್ಸ್‌ಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯ ಇವೆ. ಕಾಹೆರ್ ರಾಷ್ಟ್ರದ ಅತ್ಯುತ್ತಮ ಡೀಮ್ಡ್ ವಿವಿಗಳಲ್ಲಿ ಒಂದಾಗಿದೆ. ನ್ಯಾಕ್‌ನಿಂದ ಎರಡು ಬಾರಿ ಎ ಶ್ರೇಣಿಯ ಮಾಲ್ಯಾಂಕನ ಸಂಪಾದಿಸಿ, 3ನೇ ಅವಯ ಮರುವೌಲ್ಯಮಾಪನದಲ್ಲಿ ‘ಎ+’ ಶ್ರೇಯಾಂಕ ಪಡೆದಿದೆ. 1963ರಲ್ಲಿ ಬೆಳಗಾವಿಯಲ್ಲಿ ಪ್ರಾರಂಭಗೊಂಡ ಜೆಎನ್‌ಎಂಸಿ ಮತ್ತು 2021ರಲ್ಲಿ ಹುಬ್ಬಳ್ಳಿಯಲ್ಲಿ ಸ್ಥಾಪನೆಗೊಂಡ ಜೆಜಿಎಂಎಂಸಿ ವೈದ್ಯಕೀಯ ಕಾಲೇಜು, ಬೆಳಗಾವಿಯ ವಿ.ಕೆ. ಇನ್‌ಸ್ಟಿಟ್ಯೂಟ್ ಆ್ ಡೆಂಟಲ್ ಸೈನ್ಸ್, ಬಿ.ಎಂ.ಕಂಕಣವಾಡಿ ಬಿಎಎಂಎಸ್ ಆಯುರ್ವೇದಿಕ್ ಮತ್ತು ಬಿಎಚ್‌ಎಂಎಸ್ ಹೋಮಿಯೋಪಥಿ ಕಾಲೇಜು ಒಳಗೊಂಡಿದೆ. ಅಮೆರಿಕದ ಥಾಮಸ್ ಜೆರ್ಸನ್ ವಿವಿ ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಈಭಾಗದ ವಿದ್ಯಾರ್ಥಿಗಳು ‘ನಾನ್ ನೀಟ್’ ಕೋರ್ಸ್‌ಗಳ ಪದವಿ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೆಎಲ್‌ಇ ಎಲ್ಲ ಮಾದರಿ ಕೋರ್ಸ್‌ಗಳನ್ನು ರೂಪಿಸಿದೆ. ಅಮೆರಿಕಾದ ವಿವಿಯೊಂದಿಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿರುವುದರಿಂದ ಸ್ಥಳೀಯ ವಿದ್ಯಾರ್ಥಿಗಳು ಕಲಿಕೆಯ ಸಂದಭರ್ದಲ್ಲಿಯೇ ಜಗತ್ತಿನ ವಿಷಯಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ. ನಮ್ಮ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಬೇಕು ಎನ್ನುವುದು ನಮ್ಮ ಬಯಕೆ.| ಡಾ.ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷರು, ಕೆಎಲ್‌ಇ ಸಂಸ್ಥೆ ಬೆಳಗಾವಿ ವಿದ್ಯಾರ್ಥಿಗಳು ಎಂಬಿಬಿಎಸ್ ಒಂದನ್ನೇ ಗುರಿ ಇಟ್ಟುಕೊಳ್ಳಬಾರದು. ಇರುವ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ತಜ್ಞ ವೈದ್ಯರ ಸಹಾಯಕ್ಕೆ ಹಲವಾರು ಸಹಾಯಕರು ಬೇಕಿದ್ದು, ಅವರಿಗೆ ಬೇಡಿಕೆಯೂ ಹೆಚ್ಚಿದೆ. ವಿದ್ಯಾರ್ಥಿಗಳು ಇರುವ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು.| ಡಾ.ವಿ.ಎ.ಕೋಟಿವಾಲೆ ಕುಲಸಚಿವರು, ಕೆಎಲ್‌ಇ ವೈದ್ಯಕೀಯ ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net