ಬಿಕಾಂ ಎಸಿಸಿ ಪದವಿಗೆ ಹೆಚ್ಚಿದ ವೃತ್ತಿ ಅವಕಾಶ

KLE 100
Published on

ಹುಬ್ಬಳ್ಳಿ : ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮತ್ತು ರಿಸರ್ಚ್ ವಿಭಾಗವು ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ (ಐ ಎಸ್​ಡಿಸಿ) ಸಹಯೋಗದಲ್ಲಿ ಅಂತಾರಾಷ್ಟ್ರೀಯ ವೃತ್ತಿ ಜೀವನದ ಅವಕಾಶಗಳ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಶುಕ್ರವಾರ ಏರ್ಪಡಿಸಲಾಗಿತ್ತು .

ಸಂಪನ್ಮೂಲ ವ್ಯಕ್ತಿಗಳಾಗಿದ್ದ ರಾಜೇಶ ಪುನ್ನಯ್ಯ ಹಾಗೂ ಕ್ಯಾಲ್ವಿನ್ ಫ್ರೆಡಿ ಪೌಲ್ ಅವರು, ಬಿಕಾಂ ಎಸಿಸಿಎ ಹಾಗೂ ಸಾಮಾನ್ಯ ಬಿಕಾಂ ಯಾವ ರೀತಿಯಾಗಿ ಭಿನ್ನವಾಗಿದೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಕಾಂ ಎಸಿಸಿಎ ಪದವಿಗೆ ಇರುವ ವೃತ್ತಿ ಅವಕಾಶಗಳ ಬಗೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ಮ್ಯಾನೇಜಮೆಂಟ್ ಡೀನ್ ಡಾ. ಎಂ.ಆರ್. ಸೊಲ್ಲಾಪುರ ಅವರು, ಬಿಕಾಂ ಎಸಿಸಿ ವಿಷಯದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್​ಎಂಎಸ್​ಆರ್ ವಿಭಾಗದ ಮುಖ್ಯಸ್ಥ ಡಾ. ಜಿ.ಎಸ್. ಹಿರೇಮಠ, ಎಂಬಿಎ, ಬಿಬಿಎ ಹಾಗೂ ಬಿಕಾಂ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಡಾ. ಚಂದ್ರಹಾಸ ನಾಯ್ಡು ಸ್ವಾಗತಿಸಿದರು. ಪ್ರೊ. ಕ್ರಿಸ್ಟಿನಾ ಆರ್. ನಿರೂಪಿಸಿದರು. ಪ್ರೊ. ಕಿರಣ ಕುಮಾರ ಬಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net