ಕೆಎಲ್‌ಇ ಲಿಂಗರಾಜ ಕಾಲೇಜ್ ವಿದ್ಯಾರ್ಥಿಗೆ ಬೆಳ್ಳಿ

18Manju7
ಬೆಳಗಾವಿ ನಗರದ ಕೆಎಲ್‌ಇ ಲಿಂಗರಾಜ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಎನ್‌ಸಿಸಿ ಕೆಡೆಟ್ ಆಕಾಶ ಗುಡಗೆನಟ್ಟಿ ಅಭಿನಂದಿಸಿದರು. ಡಾ.ಎಚ್.ಎಸ್.ಮೇಲಿನಮನಿ, ಡಾ.ಮಹೇಶ ಗುರನಗೌಡರ ಇತರರಿದ್ದರು.
Published on

ಬೆಳಗಾವಿ: ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ತಮಿಳುನಾಡು-ಪುದುಚೇರಿ- ಅಂಡಮಾನ್ ಮತ್ತು ನಿಕೋಬಾರ್ ಡೈರೆಕ್ಟರೇಟ್ ಅಡಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಸ್ಪೋರ್ಟ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಜನರಲ್ ಚಾಂಪಿಯನ್‌ಶಿಪ್ ಗೆದ್ದಿದೆ.

ಚಾಂಪಿಯನ್‌ಶಿಪ್‌ನಲ್ಲಿ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಬಿಎ 4ನೇ ಸೆಮಿಸ್ಟರ್ ವಿದ್ಯಾರ್ಥಿ, ಎನ್‌ಸಿಸಿ ಕೆಡೆಟ್ ಆಕಾಶ ಗುಡಗೆನಟ್ಟಿ ಬೆಳ್ಳಿ ಪದಕ ಪಡೆದಿದ್ದಾರೆ. ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಕರ್ನಾಟಕ ಟೀಮ್ ಹಾಗೂ ಬೆಳಗಾವಿಯ ಆಕಾಶ್ ಗುಡಗೇನಟ್ಟಿ ಅವರನ್ನು ಅಭಿನಂದಿಸಿದ್ದಾರೆ. ಏರ್ ಕಮಾಂಡರ್ ಎಸ್.ಬಿ. ಅರುಣಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಇತರರಿದ್ದರು.

ವಿದ್ಯಾರ್ಥಿ ಸಾಧನೆಗೆ ಕಾಲೇಜಿನಲ್ಲಿ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಎನ್‌ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ, ಡಾ.ಶಶಿಕಾಂತ ಕೊಣ್ಣೂರ, ಪ್ರೊ. ರವಿ ಬಡಿಗೇರಿ, ಲಕ್ಷ್ಮೀ ಬಿರದಾರ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net