ಕೆಎಲ್‌ಇ ಕಾನೂನು ವಿದ್ಯಾರ್ಥಿಗಳ ಸಾಧನೆ

web1
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಅಂತರ್ ಮಹಾವಿದ್ಯಾಲಯದ ಪುರುಷ ಮತ್ತು ಮಹಿಳಾ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಚಿಕ್ಕೋಡಿ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಹಾಲಪ್ಪ ಕಂಟಿಕರ, ಭೀಮರಾವ ಹೊರಟ್ಟಿ, ಅಮಿತ ಪೂಜಾರಿ ಇತರರಿದ್ದರು.
Published on

ಚಿಕ್ಕೋಡಿ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ಈಚೆಗೆ ಜರುಗಿದ ಅಂತರ್ ಮಹಾವಿದ್ಯಾಲಯದ ಪುರುಷ ಮತ್ತು ಮಹಿಳಾ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ತತೀಯ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳಾದ ಹಾಲಪ್ಪ ಕಂಟಿಕರ, ಭೀಮರಾವ ಹೊರಟ್ಟಿ, ಅಮಿತ ಪೂಜಾರಿ, ಲಗಮಾ ಪೂಜೇರಿ, ವಿಶಾಲ ಪೂಜೇರಿ, ಪ್ರವೀಣ, ಮುಕುಂದ, ಪ್ರಕಾಶ ಪಡತಾರಿ, ಸದ್ದಾಂಹುಸೇನ್ ನದಾಫ್, ವಿಜಯ ಕೊಳೆಕರೆ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ರಾಜ್ಯದ 26 ಕಾನೂನು ಮಹಾವಿದ್ಯಾಲಯಗಳಿಂದ 227 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೆಎಲ್‌ಇ ಮಹಾವಿದ್ಯಾಲಯದ ದ್ವಿತೀಯ ವರ್ಷದ ಕಾನೂನು ಪದವಿ ವಿದ್ಯಾರ್ಥಿ ಹಾಲಪ್ಪ ಕಂಟಿಕರ್ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ. ಅವರಿಗೆ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಪಿ.ಎಂ.ಕಮತೆ ಮಾರ್ಗದರ್ಶನ ಹಾಗೂ ಶ್ರೀಧರ ಶಿರಹಟ್ಟಿ ತಂಡ ನಿರ್ವಹಿಸಿದ್ದಾರೆ. ಪ್ರಾಚಾರ್ಯ ಡಾ.ಡಿ.ಬಿ.ಸೋಲಾಪುರೆ ವಿದ್ಯಾರ್ಥಿಗಳ ಸಾಧನೆ ಪ್ರಶಂಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net