ಕಲ್ಪಿತ ನ್ಯಾಯಾಲಯದಿಂದ ಕೌಶಲ್ಯ ವೃದ್ಧಿ

ವಿದ್ಯಾರ್ಥಿಗಳು ಕಾನೂನು ವಿಷಯ ಅಧ್ಯಯನ ಮಾಡುವಾಗ ವ್ಯಾಸಂಗದ ಜತೆಗೆ ಕಲ್ಪಿತ ನ್ಯಾಯಲಯದಲ್ಲಿ ಭಾಗವಹಿಸುವುದರಿಂದ ಅನುಭವ, ಜ್ಙಾನ, ನೈತಿಕ ಮೌಲ್ಯ, ಆತ್ಮವಿಶ್ವಾಸ, ಸಂವಹನದಂತಹ ಕೌಶಲ್ಯಗಳು ಲಭಿಸುತ್ತವೆ ಎಂದು ಪ್ರಥಮ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಹೇಳಿದರು.
COURT NEW
Published on

ಹುಬ್ಬಳ್ಳಿ : ವಿದ್ಯಾರ್ಥಿಗಳು ಕಾನೂನು ವಿಷಯ ಅಧ್ಯಯನ ಮಾಡುವಾಗ ವ್ಯಾಸಂಗದ ಜತೆಗೆ ಕಲ್ಪಿತ ನ್ಯಾಯಲಯದಲ್ಲಿ ಭಾಗವಹಿಸುವುದರಿಂದ ಅನುಭವ, ಜ್ಙಾನ, ನೈತಿಕ ಮೌಲ್ಯ, ಆತ್ಮವಿಶ್ವಾಸ, ಸಂವಹನದಂತಹ ಕೌಶಲ್ಯಗಳು ಲಭಿಸುತ್ತವೆ ಎಂದು ಪ್ರಥಮ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಹೇಳಿದರು.

ಕೆಎಲ್​ಇ ಸಂಸ್ಥೆಯ ಜಿ.ಕೆ. ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಮೂಟ್​ಕೋರ್ಟ್ ಸೊಸೈಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಆಧುನಿಕ ದಿನಮಾನಗಳಲ್ಲಿ ಒಳ್ಳೆಯ ವಕೀಲರಾಗಲು ಕಾಲೇಜಿನ ಹಂತಗಳಲ್ಲಿ ಮೂಟ್​ಕೋರ್ಟ್ ಸೊಸೈಟಿ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಹಾಗೆಯೇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅನೂಕೂಲವಾಗುತ್ತದೆ ಎಂದರು.

ಅತಿಥಿಯಾಗಿದ್ದ ಹುಬ್ಬಳ್ಳಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಆರ್. ಪಾಟೀಲ ಮಾತನಾಡಿ, ವಿಧ್ಯಾರ್ಥಿಗಳಿಗೆ ವಕೀಲ ವೃತ್ತಿಯ ಕುರಿತು ಮಾಹಿತಿ ನೀಡಿದರು.

ಪ್ರಾಚಾರ್ಯ ಡಾ. ಜ್ಙಾನೇಶ್ವರ ಚೌರಿ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್.ಎಂ. ಹುಲ್ಲೂರ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಶಾರದಾ ಪಾಟೀಲ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net