ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅವಶ್ಯ; ಆಯುಕ್ತ ಡಾ..ಸಂಜಯ ಶೆಟ್ಟನ್ನವರ ಹೇಳಿಕೆ

1.jpg
Published on

ಪ್ರಾಥಮಿಕ ಕಲಿಕಾ ಹಂತದಿAದಲೇ ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಉತ್ತಮ ಶಿಕ್ಷಣ ಪಡೆದು ಜ್ಞಾನ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತ ಡಾ.ಸಂಜಯ್ ಶೆಟ್ಟೆನ್ನವರ  ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಬಿ.ಎ ಹಾಗೂ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉನ್ನತ ಗುರಿ ಹಾಗೂ ಕನಸುಗಳನ್ನು ಹೊಂದಿರಬೇಕು ಆ ಗುರಿ ಮತ್ತು ಕನಸುಗಳನ್ನು ನನಸಾಗಿಸಲು ಹಗಲಿರುಳು ಶ್ರಮಿಸಬೇಕು. ಗುರಿಸಾಧನೆಗಾಗಿ ಪೂರ್ಣಪ್ರಮಾಣದಲ್ಲಿ ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ತಮ್ಮ ಅಭ್ಯಾಸವನ್ನು ಗಂಭೀರವಾಗಿ ಪರಿಗಣಿಸಿ ಓದಬೇಕು. ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅನವಶ್ಯಕವಾಗಿ ಸಮಯವನ್ನು ಪೋಲು ಮಾಡಬಾರದು ಎಂದು ಹೇಳಿದರು.
ವiಹಾವಿದ್ಯಾಲಯದ ಪ್ರಾಚಾರ್ಯ ಡಾ. ಹೆಚ್.ಎಸ್. ಮೇಲಿನಮನಿ ಮಾತನಾಡಿ, ಶಿಕ್ಷಣವು ಬದುಕನ್ನು ರೂಪಿಸುವ ಕಾರ್ಯವನ್ನು ಮಾಡುತ್ತದೆ ವಿದ್ಯಾರ್ಥಿಗಳು ಬದುಕಿಗಾಗಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸರಿಯಾಗಿ ಓದಬೇಕು ಎಂದು ತಿಳಿಸಿದರು.
ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್.ಶೀಲಿ, ಕೀರ್ತಿ ಕಡಕೋಳ, ವಿನಾಯಕ ವರುಟೆ , ಡಾ.ರಾಘವೇಂದ್ರ ಹಜಗೋಳಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net