

ವಿಜಯವಾಣಿ ಸುದ್ದಿಜಾಲ ಗದಗ
ವಿದ್ಯಾಥಿರ್ಗಳಲ್ಲಿ ಅಸಕ್ತಿಯನ್ನು ಮೂಡಿಸುವುದೇ ವಿಜ್ಞಾನದ ವೈಶಿಷ್ಠತೆ. ವಿದ್ಯಾಥಿರ್ಗಳು ಪ್ರೌಢಶಾಲಾ ಹಂತದಲ್ಲಿಯೇ ತಮ್ಮಲ್ಲಿ ಅಡಗಿರುವ ವಿಜ್ಞಾನದ ಸೂಪ್ತ ಪ್ರತಿಭೆಯನ್ನು ಸಣ್ಣ ಸಣ್ಣ ಆವಿಷ್ಕಾರಗಳ ಮೂಲಕ ತೊಡಗಿಸಿಕೊಂಡಾಗ ಮಾತ್ರ ವಿದ್ಯಾಥಿರ್ಗಳು ಭವಿಷ್ಯದಲ್ಲಿ ದೊಡ್ಡ ವಿಜ್ಞಾನಿಗಳಾಗುತ್ತಾರೆ ಎಂದು ಡಿಡಿಪಿಐ ಎಂ.ಎ. ರೆಡ್ಡೇರ ಹೇಳೀದರು.
ಕೆ.ಎಲ್.ಇ. ಸಂಸ್ಥೆಯ ಜೆಟಿ. ಪಿಯು ಕಾಲೇಜಿನಲ್ಲಿ ಶನಿವಾರ ಪ್ರೌಢಶಾಲಾ ವಿದ್ಯಾಥಿರ್ಗಳಿಗಾಗಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಭಿತ್ತಿ ಚಿತ್ರ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ಮೇಲೆ ಯಾವುದೇ ರೀತಿಯ ಬಲವಂತದ ಗುರಿಗಳನ್ನು ಹೇರದೆ ತಮ್ಮ ಮಕ್ಕಳ ಆಸಕ್ತಿ ಇರುವ ೇತ್ರಗಳಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪೋಷಕರು ಬೆಂಬಲ ನೀಡಬೇಕು ಎಂದರು.
ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ವಿ. ನಡುವಿನಮನಿ ಮಾತನಾಡಿ, ವಿದ್ಯಾಥಿರ್ಗಳು ತಮಗೆ ಇಷ್ಟವಾದ ವಿಜ್ಞಾನ ೇತ್ರದಲ್ಲಿ ಮೊದಲು ಆಸಕ್ತಿಯನ್ನು ಬೆಳಸಿಕೊಂಡು ನಿರಂತರ ಅಭ್ಯಾಸದಲ್ಲಿ ತೊಡಗಬೇಕು. ಚಿಂತನಶೀಲರಾಗಿ ಪ್ರಯತ್ನಿಸಿದಾಗ ಮಾತ್ರ ಉತ್ತಮ ಗುರಿಯನ್ನು ತಲುಪಲು ಸಾಧ್ಯ ಎಂದರು.
ಎಸ್. ಪಿ. ಸಂಶಿಮಠ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆ ಹಾಗೂ ಭಿತ್ತಿ ಚಿತ್ರ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ನಗದು ಬಹುಮಾನ ವಿತರಿಸಲಾಯಿತು. ಜಿಲ್ಲೆಯ 40 ಕ್ಕೂ ಹೆಚ್ಚು ಪ್ರೌಢಶಾಲಾ ತಂಡಗಳು ಭಾಗವಹಿಸಿದ್ದವು. ಪ್ರೊ. ಜಿ. ಬಿ. ಸಿರ್ಕೆ, ಪ್ರೊ. ಪಿ. ಜಿ. ಪಾಟೀಲ, ಪ್ರೊ.ನೇತ್ರಾ ನಾಗಲೋಟಿಮಠ, ಪ್ರೊ. ರಾಜೇಶ್ವರಿ ರಾಜೂರ. ಪ್ರೊ. ಎಚ್. ಎಸ್. ಕೌಲಗಿ, ಪ್ರೊ. ಪ್ರದಿಪ ಸಂಗಪ್ಪಗೊಳ, ಡಾ. ಎಸ್. ವಿ. ಮಡಿವಾಳೆ, ಡಾ. ಕಿರಣಕುಮಾರ, ಡಾ. ರಮೇಶ ಜಿ.ಕೆ ಹಲವರು ಇದ್ದರು.