ಕೆ ಎಲ್ ಇ ಶಾಲೆಯಲ್ಲಿ ವೈಧ್ಯರ ದಿನಾಚರಣೆ

Doctors Day Photo
Published on

ಗದಗ:

ನಗರದ ಕೆ ಎಲ್ ಇ ಸಂಸ್ಥೆಯ ಸಿ ಬಿ ಎಸ್ ಇ ಶಾಲೆಯಲ್ಲಿ ವೈಧ್ಯರ ದಿನಾಚರಣೆ ಕಾರ್ಯಕ್ರಮವನ್ನು ವಿದ್ಯಾಥಿ೯ಗಳು ಕಿರು ನಾಟಕವನ್ನು ಪ್ರಸ್ತುತ ಪಡಿಸುವುದರ ಮೂಲಕ ಮತ್ತು ಯೋಗದಿಂದ ರೋಗ ದೂರ ಎಂಬುದನ್ನು ಜುಂಬಾ ನೃತ್ಯ ಮಾಡುವುದರ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಯುತ ಡಾ, ಬಾಳೇಶ ಸಿರಗುಂಪಿ ಮಾತನಾಡಿ "ಜೀವನದಲ್ಲಿ ಉತ್ತಮವಾದ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು. ಉತ್ತಮವಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಆರೋಗ್ಯವೇ ಭಾಗ್ಯ" ಎಂದು ನುಡಿದರು.

ಇದೇ ಸಂದಭ೯ದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕಲ್ಪನಾ ಚಚಡಿ ಮಾತನಾಡಿ "ಸುಂದರ ಪರಿಸರ, ಒಳ್ಳೇಯ ಆಹಾರ ಸೇವನೆ ಮತ್ತು ನಿತ್ಯ ವ್ಯಾಯಾಮದಿಂದ ಆರೋಗ್ಯಪೂರ್ಣವಾಗಿ ಬದುಕಬಹುದು ಎಂದು ನುಡಿದರು". ಇದೆ ಸಂದಭ೯ದಲ್ಲಿ ಡಾ, ಶ್ರೀ ಬಾಳೇಶ ಸಿರಗುಂಪಿ ವೈಧ್ಯರ ಸೇವಾ ಮನೋಭಾವನೆಯನ್ನು ಮೆಚ್ಚಿ ಸತ್ಕರಿಸಲಾಯಿತು. ಎರಡನೆ ತರಗತಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಐದನೆ ತರಗತಿ ವಿದ್ಯಾರ್ಥಿಗಳು ವೈಧ್ಯಗೀತೆ ಹಾಡಿದರು. ಕುಮಾರಿ ಶ್ರೀಯಾ ಜೋಶಿ, ಸೀಯಾ ಪುಂಗಾಲಿಯಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸಾಚಿ ಕುಡತರಕರ ಅತಿಥಿಗಳನ್ನು ಸ್ವಾಗತಿಸಿದರು. ಕುಮಾರ ವಿಶ್ವಾಸ ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ ಸ್ವಾತಿ ಹುಬ್ಬಳ್ಳಿ ವಿದ್ಯಾರ್ಥಿನಿ ವಂಧನೆಗಳನ್ನು ತಿಳಿಸಿದರು. ಶ್ರೀಮತಿ ಸುರೇಖಾ ಕದಂ ವಿಜ್ಞಾನ ವಿಭಾಗದ ಮುಖ್ಯಸ್ಥರು ಮತ್ತು ವಿಜ್ಞಾನ ವಿಭಾಗದ ಶಿಕ್ಷಕ,ಶಿಕ್ಷಕಿಯರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net